ಅಡವಿ ನಿರುಪಾದೇಶ್ವರ ಅದ್ದೂರಿ – ಪಲ್ಲಕ್ಕಿ ಉತ್ಸವ.
ಗೊರಬಾಳ ನ.11

ಇಳಕಲ್ಲ ತಾಲೂಕಿನ ಸಮೀಪದ ಗೊರಬಾಳ ಗ್ರಾಮದ ಶ್ರೀ ಅಡಿವಿ ನಿರುಪಾದೇಶ್ವರ ಅಂಕಲಿ ಮಠದ ಜಾತ್ರೋತ್ಸವದ ಅಂಗವಾಗಿ ಬೆಳಗ್ಗೆ 9:00 ರಿಂದ ಅದ್ದೂರಿ ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾಯಿತು.

ಗ್ರಾಮದ ದೇಸಾಯಿ ಮುತ್ಯನಾ ಗುಡಿಯಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಕಳಸ 108 ಕುಂಭ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಕಲಿಮಠ ತಲುಪಿತು.

ಗ್ರಾಮದ ಪ್ರಮುಖ ಬೀದಿಯ ಪ್ರತಿ ಮನೆಯಲ್ಲಿಯೂ ಜಾತಿ ಭೇದ ಭಾವ ಇಲ್ಲದೆ ಪಲ್ಲಕ್ಕಿಗೆ ಪೂಜೆ ಮಹೋತ್ಸವ ನಡೆಯಿತು. ನಂತರ ಸಾಮೂಹಿಕ ವಿವಾಹ ಸಮಾರಂಭ ಧರ್ಮಸಭೆ ನಡೆಯಿತು.

