ದೇವರ ಹಸುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ – ಸಮಾಜ ಸೇವಕಿ ಶುಭ ಸೋಮಶೇಖರ್.
ಚಳ್ಳಕೆರೆ ಏ.13

ಬುಡಕಟ್ಟು ಸಮುದಾಯದ ದೇವರ ಎತ್ತುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಚಳ್ಳಕೆರೆ ನಗರದ ಸಮಾಜ ಸೇವಕಿ ಶುಭ ಸೋಮಶೇಖರ್ ತಿಳಿಸಿದರು. ತಾಲೂಕಿನ ಅಜ್ಜನಗುಡಿ ಹತ್ತಿರದ ದೇವರ ಹಸುಗಳಿಗೆ ತಮ್ಮ ಮಗ ಅಭಿಷೇಕ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಾಳೆಹಣ್ಣು ಮತ್ತು ಇತರೆ ಅಗತ್ಯ ಆಹಾರ ಧಾನ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ಚಳ್ಳಕೆರೆ ತಾಲ್ಲೂಕು ಬರ ಪೀಡಿತವಾದರೂ ತನ್ನ ಒಡಲೊಳಗೆ ಇಟ್ಟು ಕೊಂಡಿರುವ ಸಾಂಸ್ಕೃತಿಕ ಶ್ರೀಮಂತಿಕೆ ಯಿಂದ ಪ್ರಸಿದ್ಧಿಯನ್ನು ಪಡೆದಿದೆ. ಮ್ಯಾಸಬೇಡ ಬುಡಕಟ್ಟು ಸಮುದಾಯದ ಆರಾಧ್ಯ ದೈವವಾಗಿ ಗೋವುಗಳನ್ನು ಪೂಜಿಸುವ ಪೋಷಿಸುವ ವಿಶಿಷ್ಟ ಸಂಸ್ಕೃತಿಯನ್ನು ಕಾಣುತ್ತಿದ್ದೇವೆ.

ಹಸುಗಳೊಂದಿಗೆ ಜನ್ಮ ದಿನದ ಆಚರಣೆ ಬಹಳ ಋಷಿ ಕೊಟ್ಟಿದೆ ಎಂದರು. ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ ಭಾರತೀಯ ಸನಾತನ ಪರಂಪರೆಯಲ್ಲಿ ಗೋವಿಗೆ ಬಹಳ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಇಂತಹ ಇವುಗಳಿಗೆ ಶೇಡ್, ಮೇವು ಮತ್ತು ನೀರಿನ ಅವಶ್ಯಕತೆ ಇದ್ದು ಅವುಗಳನ್ನು ಪೂರೈಸುವ ಕೆಲಸವನ್ನು ಸರ್ಕಾರ ಜನ ಪ್ರತಿನಿಧಿಗಳು ಸಮಾಜ ಸೇವಕರು ಮಾಡಬೇಕಿದೆ ಎಂದರು.

ಗೋವುಗಳ ಮೇಲ್ವಿಚಾರಕ ಸಿದ್ದೇಶ್ ದೇವರ ಎತ್ತುಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ರುಕ್ಮಿಣಿ, ಮೋಹನಿ, ತಿಪ್ಪಮ್ಮ ಉಮಾಶಂಕರ್, ಈರಣ್ಣ, ಕಿಲಾರಿಗಳಾದ ಪಾಲಯ್ಯ, ಓಬಯ್ಯ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.