ಶ್ರೀಶಾರದಾಶ್ರಮದಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದ – ಪ್ರವಚನ ಮಾಲಿಕೆ.
ಚಳ್ಳಕೆರೆ ಏ.14

ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ‘ವಿಶ್ವಗುರು ಸ್ವಾಮಿ ವಿವೇಕಾನಂದ’ ಪ್ರವಚನ ಮಾಲಿಕೆ ಯಡಿಯಲ್ಲಿ ಸ್ವಾಮಿ ಸದಾಶಿವಾನಂದರ ಸ್ಮೃತಿಗಳ ಬಗ್ಗೆ ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪ್ರವಚನ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಹಾಗೂ ಕುಮಾರಿ ಹರ್ಷಿತ ಅವರಿಂದ ಶ್ರೀಮದ್ ಭಗವದ್ಗೀತೆಯ ೧೦ ನೇ. ಅಧ್ಯಾಯ-ವಿಭೂತಿ ಯೋಗದ ಶ್ಲೋಕಗಳ ಪಠಣ ಕಾರ್ಯಕ್ರಮ ನಡೆಯಿತು.

ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ರತ್ನಮ್ಮ ಚೆನ್ನಬಸಪ್ಪ, ನಾಗರಾಜ್, ಗೀತಾ, ವೆಂಕಟೇಶರೆಡ್ಡಿ, ಕೆ.ಎಸ್, ವೀಣಾ, ಯತೀಶ್ ಎಂ ಸಿದ್ದಾಪುರ, ಚೇತನ್, ಮಂಜುಳ ಉಮೇಶ್, ಅಂಬುಜಾ ಶಾಂತಕುಮಾರ್, ವೆಂಕಟೇಶ್, ಗಾಯನ, ಶ್ಯಾಮ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.