“ಬುದ್ಧ ಬಸವ ಅಂಬೇಡ್ಕರ್ ಜಗವ ಬೆಳಗುತ್ತಿರುವಭಾರತ ನಂದಾ ದೀಪಗಳು”…..

ಬುದ್ಧ ಬಸವ ಅಂಬೇಡ್ಕರ್ ಜಗವ
ಬೆಳಗುತ್ತಿರುವ ಭಾರತ ನಂದಾ ದೀಪಗಳು
ಭರತ ಪುಣ್ಯ ಭೂಮಿಯಲಿ
ಅವತರಿಸಿದ ವಿಶ್ವ ಸಮಾನತೆಯ ರತ್ನತ್ರಯರು
ಮಾನವೀಯತೆಯ ವಂಚಿತರಿಗೆ ಸೌಲಭ್ಯದ
ಸಿರಿಗಾಗಿ ಶ್ರಮಿಸಿದ ಮಹಾನ್
ಮಾನವತಾವಾದಿಗಳು
ಆಸೆಗಳೇ ಮಾನವನ ಅವನತಿಗೆ
ಕಾರಣವೆಂದ ಬುಧ್ಧ
ಅಯ್ಯಾ ಎನುವುದೆ ಸ್ವರ್ಗವೆಂದ ಬಸವ
ಮಾನವೀಯತೆಯೇ ನಿಜ ಕುಲವೆಂದರು
ಸರ್ವಜನ ಹಿತವೇ ಸಮಾನತೆಯ ದೀಪ
ಬೆಳಗಿದವರು
ವಿಶ್ವ ಬಂಧು ಡಾ. ಬಾಬಾಸಾಹೇಬ
ಅಂಬೇಡ್ಕರ್
ಜ್ಞಾನದಿಂದ ಬುದ್ಧ ಜಗವ ಬೆಳಗಿದ ಅಮರ
ಜ್ಯೋತಿ
ಭಾರತ ದೇಶದ ಬುದ್ಧ ಬಸವ ಅಂಬೇಡ್ಕರ್
ಜಗದಲಿ ಆಚಂದ್ರಾರ್ಕ
ಬುದ್ಧ ಬಸವ ಅಂಬೇಡ್ಕರ್ ವಿಶ್ವ ಬೆಳಗುವ
ಧೃವ ನಕ್ಷತ್ರಗಳು
ವಿಶ್ವ ಭಾರತ ಜನಮಾನಸದಲಿ ನಿತ್ಯ ನಿರಂತರ
ತತ್ವ ಆದರ್ಶಗಳು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.