ಕೀರ್ತಿ ಲಕ್ಷಣ ಕೆಳಗಡೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು – ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಮುಗಳಖೋಡ್ ಏ.16

ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಮುಗಳಖೋಡ್ ವಿದ್ಯಾರ್ಥಿನಿಯಾದ ಕುಮಾರಿ ಕೀರ್ತಿ ಲಕ್ಷ್ಮಣ ಕೆಳಗಡೆ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಶತ 91% ಅಂಕ ಗಳಿಸುವ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ಇತಿಹಾಸ ವಿಷಯದಲ್ಲಿ 100 ಕ್ಕೆ100 ಅಂಕ ಪಡೆದು ಕೊಂಡಿದ್ದಕ್ಕಾಗಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಜಿ ಹಂಚಿನಾಳ ಹಾಗೂ ಸಿಬ್ಬಂದಿವರ್ಗ ವಿದ್ಯಾರ್ಥಿನಿ ಮನೆಗೆ ತೆರಳಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುಮಾರಿ ಮೀನಾಕ್ಷಿ ಖಣದಾಳೆ ಆನಂದಾ ದುಂಡಗಿ ಪ್ರಿಯಾಂಕಾ ಜಂಬಗಿ ಶ್ರುತಿ ಹಿರೇಮಠ ಅನಿತಾ ಮಾದರ ಸವಿತಾ ಕರಗಾಂವಿ ಜ್ಯೋತಿ ಹುಲಗಣಿ ಸವಿತಾ ಬಳಿಗಾರ ಮುಂತಾದ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಕ್ಕಾಗಿ ಅವರ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸತ್ಕರಿಸಿದರು. ಈ ಸಂಧರ್ಭದಲ್ಲಿ ಸಿಬ್ಬಂದಿಗಳಾದ ಶ್ರೀ ಜಿ ಎಸ್ ಜಂಬಗಿ. ಬಿ ಬಿ ಬಂಡಿಗಣಿ. ಬಿ ವಿ ಹಟ್ಟಿಮನಿ ಪಿ ಆರ್ ತೆಳಗಡೆ ಪ್ರಕಾಶ್ ರಾವತ್ ಎಂ ವಾಯ್ ಹುಲ್ಲೆನ್ನವರ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ.ಆರ್.ತೇಳಗಡೆ.ರಾಯಬಾಗ