ಸೌಲಭ್ಯಗಳಿಂದ ವಂಚಿತವಾದ ಹಿರೇಕೊಟ್ನೇಕಲ್ – ಗ್ರಾಮದ ಕಥೆ, ಸಾರ್ವಜನಿಕರ ವ್ಯಥೆ.
ಹಿರೇಕೊಟ್ನೇಕಲ್ ಏ.16

ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಎಂದು ಮಹಾತ್ಮ ಗಾಂಧೀಜಿಯವರ ಚಿಂತನೆಯಾಗಿತ್ತು. ಆದರೆ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮವನ್ನು ಒಮ್ಮೆ ಸುತ್ತು ಹಾಕಿದರೆ ಸಾಕು ಪಿ.ಡಿ.ಓ ನಾಗಭೂಷಣಪ್ಪನ ಕರ್ಮಕಾಂಡದ ಅಭಿವೃದ್ಧಿ ಯಾವ ರೀತಿ ಇದೆ ಎಂದು ಸಮಾಜಕ್ಕೆ ತಿಳಿಯುತ್ತದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದಲ್ಲಿ ಬೋವಿ ಸಮಾಜ ವಾಸಿಸುವ ಏರಿಯಾವನ್ನು ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ನೋಡಿದರೆ ಸಾಕು ವಾಂತಿ ಮಾಡಿಕೊಳ್ಳುವುದು ಪಕ್ಕಾ.

ಪಿ.ಡಿ.ಓ ನಾಗಭೂಷಣಪ್ಪ ಪಂಚಾಯತಿಗೆ ಅದ್ಯಾವಾಗ ಬರುತ್ತಾನೆಂದು ಜನರಿಗೆ ತಿಳಿಯದಾಗಿದ್ದು. ನಾಗಭೂಷಣಪ್ಪನ ಮುಸುಡಿಯೂ ಹಿರೇಕೊಟ್ನೇಕಲ್ ಗ್ರಾಮದ ಜನರು ನೋಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರ ಆಡಳಿತ ದುರಾಡಳಿತದಿಂದ ನಡೆದಿರುವುದರಿಂದ ಗ್ರಾಮಗಳು ಅಭಿವೃದ್ಧಿಯಾಗದೆ ದುರ್ನಾತದಲ್ಲಿ ಮುಳುಗಿರುವುದು ಸಾಕ್ಷಿಯಾಗಿ ಹಿರೇಕೊಟ್ನೇಕಲ್ ಗ್ರಾಮ ಎದ್ದು ಕಾಣುತ್ತಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ