ಕೆ.ಪಿ ನಂಜುಂಡಿ ವಿಶ್ವಕರ್ಮ ಹುಟ್ಟು ಹಬ್ಬದ ಅಂಗವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ – ಎಪ್ರೀಲ್ ಕೂಲ್ ಕಾರ್ಯಕ್ರಮ.

ಸಿಂಧನೂರು ಏ.16

ನಗರದ APMC ಗಣೇಶ ದೇವಸ್ಥಾನದ ಆವರಣದ ಉದ್ಯಾನವನದಲ್ಲಿ ವಿಶ್ವಕರ್ಮ ಸಮಾಜ ಸಿಂಧನೂರು ಹಾಗೂ ವನಸಿರಿ ಪೌಂಡೇಷನ್ (ರಿ) ರಾಯಚೂರು ವತಿಯಿಂದ ಮಾಜಿ ವಿಧಾನ ಪರಿಷತ್ ಸದಸ್ಯರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮುದಾಯದ ಜನಪ್ರಿಯ ನಾಯಕರಾದ ಕೆ.ಪಿ ನಂಜುಂಡಿ ಯವರ 60 ನೇ. ಹುಟ್ಟು ಹಬ್ಬದ ಪ್ರಯುಕ್ತ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾ ಸ್ವಾಮಿಗಳು ಮತ್ತು ಮಾತೋಶ್ರೀ ಸುಮಂಗಲಮ್ಮ ಅವರು ಅರವಟ್ಟಿಗೆಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮ ಮುಖ್ಯ ಅತಿಥಿ ಆಗಿ ಆಗಮಿಸಿದ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ವನಸಿರಿ ಪೌಂಡೇಷನ್ ಸುಮಾರು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದು, ಇಂದು ವಿಶ್ವಕರ್ಮ ಸಮಾಜಕ್ಕೆ ಹಗಲಿರುಳು ಶ್ರಮಿಸುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ ನಂಜುಂಡಿ ವಿಶ್ವಕರ್ಮ ಅವರ 60 ನೇ. ಹುಟ್ಟುವನ್ನು ವಿಶೇಷವಾಗಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಸಿಂಧನೂರು ವಿಶ್ವಕರ್ಮ ಸಮಾಜದ ಬಂಧುಗಳು ಆಚರಿಸುತ್ತಿರುವುದು ಬಹಳ ಶ್ಲಾಘನೀಯ ಕಾರ್ಯ ಇವತ್ತು ಯುವಕರು ಮೋಜು ಮಸ್ತಿಗಿಳಿಯುವ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ಜೊತೆಗೆ ಕೈಜೋಡಿಸಿ ಮೂಕ ಪ್ರಾಣಿ ಪಕ್ಷಿಗಳಿಗೆ ನಿರುಣಿಸುತ್ತಿರುವುದು ಹೆಮ್ಮೆಯ ವಿಷಯ.

ಇದೇ ರೀತಿ ಹಿಂದೆ ಇವರ ನೇತೃತ್ವದಲ್ಲಿ ಕನಕಗಿರಿ ಹತ್ತಿರ ಬೈರಾಪುರ ಗ್ರಾಮದ ಮೌನೇಶ್ವರ ದೇವಸ್ಥಾನ ಉದ್ಘಾಟನೆ ಸಂಧರ್ಭದಲ್ಲಿ ಕೂಡಾ ಸಸಿಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಮತ್ತು ನಮ್ಮ ಆಲದ ಮರದ ಹತ್ತಿರ ಜಾಕಣಾಚಾರಿ ಜಯಂತಿ ಅಂಗವಾಗಿ ಸಸಿ ನೆಟ್ಟಿರುವುದು ಹೆಮ್ಮರವಾಗಿ ಬೆಳೆದಿವೆ ಇದು ಅವರ ಪರಿಸರದ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇವರಿಗೆ ತಾಯಿ ವೃಕ್ಷ ಮಾತೆಯ ಆರ್ಶಿವಾದ ಸದಾಕಾಲ ಇರಲಿ ಮತ್ತು ನೀವುಗಳೆಲ್ಲರೂ ವನಸಿರಿ ಪೌಂಡೇಷನ್ ಜೊತೆಗೆ ಸದಾಕಾಲ ಹೀಗೆ ಕೈಜೋಡಿಸ ಬೇಕು ಮತ್ತು ವಿಶ್ವಕರ್ಮ ಸಮಾಜದ ಚನ್ನಪ್ಪ ಕೆ ಹೊಸಹಳ್ಳಿ ಮತ್ತು ರಾಜು ಪತ್ತಾರ ಅವರ ಮೇಲೆ ವನಸಿರಿ ತಂಡದ ಜವಾಬ್ದಾರಿ ಬಹಳ ಇದೆ. ನಮ್ಮ ತಂಡವನ್ನು ಮುನ್ನಡೆಸು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುತ್ತೇವೆ. ನಮಗೆ ನಿಮ್ಮ ಸಹಕಾರ ಸದಾಕಾಲ ಇರಲಿ ಎಂದು ತಿಳಿಸಿದರು.ಇದೇವೇಳೆ ಶ್ರೀ ಕಾಳಿಕಾದೇವಿ ದೇವಸ್ಥಾನ ಹಾಗೂ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ಬಡಿಗೇರ ಸಂಘದ ಅಧ್ಯಕ್ಷ ರವೀಂದ್ರ ಗದ್ರಟಗಿ, ವಿರೇಶ ಕೋಟೆ, ಕ.ರ.ವೇ ಉಪಾಧ್ಯಕ್ಷ ಬಸವರಾಜ ವಿಶ್ವಕರ್ಮ, ವೀರಭದ್ರ ಅಲಬನೂರು, ಬಸವರಾಜ ಕಮತಗಿ, ನರಸಪ್ಪ ಪೂಜಾರಿ, ಚನ್ನಪ್ಪ ಕೆ ಹೊಸಹಳ್ಳಿ,ರಾಜು ಬಳಗಾನೂರ, ವಿರೇಶ ಸುಕಲಪೇಟೆ, ಮುತ್ತಣ್ಣ ಪತ್ತಾರ, ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇನ್ನಿತರರು ಇದ್ದರು ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button