ಅಮಾಯಕನನ್ನು ಬಲಿ ಪಡೆದ ಮಾನ್ವಿ – ಕೆಇಬಿ ಇಲಾಖೆ.
ಹಿರೇಕೊಟ್ನೇಕಲ್ ಏ.16

ಸರಕಾರದ ನಿಯಮದ ಪ್ರಕಾರ ಕೆಇಬಿ ಇಲಾಖೆಯ ಸಿಬ್ಬಂದಿಗಳು ಕೆಲಸ ಮಾಡಬೇಕು. ಆದರೆ ಅಮಾಯಕ ವ್ಯಕ್ತಿ ಮೊಹಮ್ಮದ್ ರಫಿ ಎಂಬ ವ್ಯಕ್ತಿಯನ್ನು ಮಾನ್ವಿ ಕೆಇಬಿ ಇಲಾಖೆಯ ಜೆ.ಇ ವಾಸಿಮ್ ಅಕ್ರಮ್ ಹಾಗೂ ಲೈನ್ ಮನ್ ಪರಶುರಾಮ ಅವರು ವಿದ್ಯುತ್ ಕೆಲಸಕ್ಕೆ ಬಳಸಿ ಕೊಂಡ ಅನಾಹುತಕ್ಕೆ ವಿದ್ಯುತ್ ಅವಘಡ ಸಂಭವಿಸಿ ಸಾವನ್ನಪ್ಪಿರುವ ಘಟನೆ ಹಿರೇಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಕೆಇಬಿ ಇಲಾಖೆಯ ಅಭಿಯಂತರ ವಾಸಿಮ್ ಅಕ್ರಮ್ ಹಾಗೂ ಲೈನ್ ಮನ್ ಪರಶುರಾಮರ ದುರಾಡಳಿತದಿಂದ ಅಮಾಯಕ ವ್ಯಕ್ತಿ ಮೊಹಮ್ಮದ್ ರಫಿಯನ್ನು ಕೆಲಸಕ್ಕೆ ಬಳಸಿ ಕೊಂಡು ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೊಹಮ್ಮದ್ ರಫಿ ಸಾವಿಗೆ ಮಾನ್ವಿ ಕೆಇಬಿ ಇಲಾಖೆಯ ಅಭಿಯಂತರ ವಾಸಿಮ್ ಅಕ್ರಮ್ ಲೈನ್ ಮನ್ ಕಾರಣ ಇವರ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಿ ನಮಗೆ ಸರಕಾರ ನ್ಯಾಯ ನೀಡಬೇಕು ಎಂದು ಮೊಹಮ್ಮದ್ ಕುಟುಂಬಸ್ಥರ ಒತ್ತಾಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ