ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಶ್ರೀ ಕೂಡಿಬಸವೇಶ್ವರ ರಥೋತ್ಸವ – ಅದ್ದೂರಿಯಾಗಿ ಜರುಗಿತು.
ಹಿರೇಹೆಗ್ಡಾಳ್ ಏ.18

ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಶ್ರೀ ಕೂಡಿ ಬಸವೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕೂಡಿ ಬಸವೇಶ್ವರ ಸ್ವಾಮೀಯ ಉತ್ಸವ ಮೂರ್ತಿಯನ್ನು ಸಕಲ ವಾಧ್ಯ ಗಳೊಂದಿಗೆ ಪಲ್ಲಕ್ಕಿಯಲ್ಲಿ ರಥದ ಬಳಿ ಕರೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಟಾಪಿಸಲಾಯಿತು.ಈ ವೇಳೆ ಶ್ರೀ ಕೂಡಿ ಬಸವೇಶ್ವರ ಸ್ವಾಮೀಯ ಪಟ ಹರಾಜಿನಲ್ಲಿ ಹಿರೇಹೆಗ್ಡಾಳ್ ಗ್ರಾಮದ ಕೆ.ವೀರೇಶ್ ಅವರಿಗೆ 1₹ ಲಕ್ಷದ 85 ಸಾವಿರ ರೂ ಗಳಿಗೆ ಪಡೆದು ಕೊಂಡರು. ಸ್ವಾಮಿಯು ರಥ ವೇರುತ್ತಿದಂತೆ ನೆರದಿದ್ದ ಭಕ್ತರು ಜೈ ಪರಾಕ್ ಎಂದು ಜಯ ಘೋಷ ಹಾಕಿದರು. ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಮದ ಸುತ್ತಲ್ಲಿನ ಹಳ್ಳಿಯ ಸಾವಿರಾರು ಭಕ್ತರು ಭಾಗಿಯಾಗುವ ಮೂಲಕ ಭಕ್ತಿ ಸಮರ್ಪಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ