ಗುಣಮಟ್ಟದ ಶಿಕ್ಷಣದಿಂದ ಜೀವನ ಸುಧಾರಣೆ ಸಾಧ್ಯ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಕೂಡ್ಲಿಗಿ ಡಿಸೆಂಬರ್.25

ಗುಣಮಟ್ಟ ಶಿಕ್ಷಣದಿಂದ ಜೀವನ ಸುಧಾರಣೆ ಸಾಧ್ಯ ಸರ್ಕಾರ ಮಟ್ಟದಲ್ಲಿ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಕೂಡ್ಲಗಿ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಶೈಕ್ಷಣಿಕ ಬೆಳವಣಿಗೆ ಸಂಬಂಧಿಸಿದಂತೆ ಶ್ರೀ ನರಸಿಂಹಗಿರಿ ವಿದ್ಯಾ ಸಂಸ್ಥೆ ಹಾಗೂ ಶ್ರೀ ವಾಲ್ಮೀಕಿ ವಿದ್ಯಾ ಸಂಸ್ಥೆಗಳು ಹಮ್ಮಿಕೊಂಡಿರುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ವೇಳೆ ಮಾಜಿ ಶಾಸಕ ಹಾಗೂ ನರಸಿಂಹಗಿರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರು ದಿ. ಎನ್.ಟಿ ಬೊಮ್ಮಣ್ಣನವರ ಭಾವ ಚಿತ್ರಕ್ಕೆ ಶಾಸಕ ಶ್ರೀನಿವಾಸ್ ಪೂಜೆ ಪುಷ್ಪ ನಮನ ಸಲ್ಲಿಸಿದರು. ನನ್ನ ತಂದೆಯವರಾದ ಮಾಜಿ ಶಾಸಕರು ದಿವಂಗತ ಎನ್. ಟಿ. ಬೊಮ್ಮಣ್ಣನವರು ಗ್ರಾಮೀಣ ಪ್ರದೇಶಗಳಲ್ಲಿ ನರಸಿಂಹಗಿರಿ ವಿದ್ಯಾ ಸಂಸ್ಥೆ ಹೆಸರಲ್ಲಿ ಶಾಲೆಗಳನ್ನು ತೆರೆದು ಅನೇಕರು ವಿದ್ಯಾವಂತರಾಗಿ ಉದ್ಯೋಗ ಪಡೆಯುವ ಮೂಲಕ ಸ್ವಾವಲಂಬಿಗಳಾಗಿ ಜೀವಿಸುವಂತೆ ನೋಡಿ ಕೊಂಡಿರುವಂತದ್ದು, ಆ ಕಾಲಕ್ಕೆ ಒಂದು ಮಾದರಿ ಎಂದೂ ಹೇಳಬಹುದು. ಹೀಗಾಗಿ ಈ ಭಾಗದ ಕಷ್ಟದಲ್ಲಿ ಇರುವ ಜನತೆಯನ್ನು ಮೇಲಕ್ಕೆ ಎತ್ತಲು ಸರ್ಕಾರ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಾನವ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಕನಸು ಇಟ್ಟು ಕೊಂಡಿದ್ದೇನೆ. ಪ್ರತಿಯೊಂದು ಶಾಲೆಗಳ ಮೂಲ ಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಶಾಲೆಗಳ ಶೈಕ್ಷಣಿಕ ಬೆಳವಣಿಗೆಗೆ ಸಿಬ್ಬಂದಿಗಳ ಶಿಸ್ತು ಮತ್ತು ಸಹಕಾರ ಅಗತ್ಯವಿದೆ. ಎಲ್ಲರೂ ಜಾತಿ ಭೇದ ಭಾವ ಮರೆತು ಸಹಕಾರ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರ ಸಿಬ್ಬಂದಿಗಳ ಪರ ನಮ್ಮ ಕುಟುಂಬ ಸದಾ ಕಾಲವೂ ನಿಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಮತ್ತು ಸಮಾಜ ಸೇವಕರಾದ ತಮ್ಮಣ್ಣ ಎನ್.ಟಿ ಹಾಗೂ ಶ್ರೀ ನರಸಿಂಹಗಿರಿ ಹಾಗೂ ಶ್ರೀ ವಾಲ್ಮೀಕಿ ವಿದ್ಯಾ ಸಂಸ್ಥೆಯ ಎಲ್ಲಾ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ