ಸಾಮಾಜಿಕ ಬದಲಾವಣೆಯ ಹರಿಕಾರ ಜಗಜೀವನ ರಾಮ್ – ಸಂತೋಷ.ಬಂಡೆ.
ಇಂಡಿ ಏ.05

ಬಾಬು ಜಗಜೀವನರಾಮ್ ತಮ್ಮ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶನಿವಾರ ದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಅವರ 118 ನೇ. ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಜಗಜೀವನ್ ರಾಮ್ ಅವರು ಮೇಲು–ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸುತ್ತಾ, ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು. ಶಿಕ್ಷಕ ಎಸ್.ಆರ್ ಚಾಳೇಕರ ಮಾತನಾಡಿ, ‘ಹಸಿರು ಕ್ರಾಂತಿಯ ಹರಿಕಾರರಾದ ಅವರು, ದೇಶದಲ್ಲಿ ಆಹಾರದ ಕೊರತೆ ಯಾಗದಂತೆ ಭದ್ರ ಅಡಿಪಾಯ ಹಾಕಿದರು. ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸುತ್ತಾ, ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದ್ದು, ಇಂದಿಗೂ ಪ್ರೇರಣೆಯಾಗಿದೆ’ ಎಂದು ತಿಳಿಸಿದರು.ಮುಖ್ಯ ಶಿಕ್ಷಕಿ ವ್ಹಿ.ವೈ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶಾಂತೇಶ ಹಳಗುಣಕಿ, ಎಸ್.ಡಿ ಬಿರಾದಾರ, ಎನ್.ಬಿ ಚೌಧರಿ, ಎಸ್.ಪಿ ಪೂಜಾರಿ, ಸಾವಿತ್ರಿ ಸಂಗಮದ, ಸುಮಿತ್ರಾ ನಂದಗೊಂಡ, ಎಫ್ ಎ ಹೊರ್ತಿ, ಎಸ್ ಎನ್ ಡಂಗಿ, ಜೆ ಸಿ ಗುಣಕಿ ಹಾಗೂ ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ