JSW ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ – ವತಿಯಿಂದ ಮಕ್ಕಳ ಬೇಸಿಗೆ ಶಿಬಿರ.
ಹೊಸಪೇಟೆ ಏ.19

ಹೊಸಪೇಟೆ ತಾಲೂಕಿನ ಗಾದಿಗನೂರ ಗ್ರಾಮದ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಜೆ.ಎಸ್.ಡಬ್ಲ್ಯೂ ಆಸ್ಪೈರ್ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ವತಿಯಿಂದ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ. ಮಕ್ಕಳು ಶಿಬಿರದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹುಲಿರಾಜ್ ತಿಳಿಸಿದರು. ನಂತರ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಓದಿನ ಬಗ್ಗೆ ಪೋಷಕರೊಂದಿಗೆ ವಿಚಾರಿಸುತ್ತಿದ್ದರು. ಪೋಷಕರ ಸಭೆ ಯುವಕರು ಸೇರಿಸಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಆಹ್ವಾನಿಸಿದರು.ತಾಲೂಕಿನ ಗಾದಿಗನೂರು ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಮಕ್ಕಳಿಗಾಗಿ ಆಯೋಜಿಸಲಾದ ಬೇಸಿಗೆ ಶಿಬಿರ ತರಬೇತಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೂಪಾ ಶಿಕ್ಷಕರು ಮಕ್ಕಳ ಜೀವನ ಕೌಶಲ್ಯ, ಗಣಿತ ಕನ್ನಡ ತರಗತಿ ಉತ್ತಮವಾಗಿ ನಡೆಸಿದರು. ನಂತರ ಮಾತನಾಡಿದ್ದ ಯುವ ಮುಖಂಡರಾದ ಸಮಾಜ ಸೇವಕ ಕೆ.ಎಂ ಗಾದಿಲಿಂಗಪ್ಪ ಮಕ್ಕಳ ಬೇಸಿಗೆ ಶಿಬಿರನ್ನು ಈ ವರ್ಷ ಗ್ರಾಮೀಣ ಭಾಗದ ಮಕ್ಕಳಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಮತ್ತು ಕಲೆಗಳಲ್ಲಿ ತರಬೇತಿ ಪಡೆದು ಕೊಳ್ಳಬೇಕು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ