ಮಲೇರಿಯಾ ರೋಗ ತಡೆಗೆ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಿರಿ – ಎಸ್.ಎಸ್ ಅಂಗಡಿ.
ಬಾಗಲಕೋಟೆ ಏ.24

ಜಿಲ್ಲಾ ಆರೋಗ್ಯ ಇಲಾಖೆಯಿಂದ. ತಾಲೂಕಿನ ಬೆನಕಟ್ಟಿಯ ವ್ಯಾಪ್ತಿಯ ಬೆನಕಟ್ಟಿ, ಗುಂಡನಪಲ್ಲೆ ಗ್ರಾಮದಲ್ಲಿ “ವಿಶ್ವ ಮಲೇರಿಯಾ ದಿನ ಜನ ಜಾಗೃತಿ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ನಿಮ್ಮ ಆರೋಗ್ಯ ನಮ್ಮ ಬದ್ಧತೆ, ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಮಲೇರಿಯಾ ರೋಗವು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಚಳಿ ಜ್ವರ ನಡುಕ, ತಲೆನೋವು ವಾಂತಿ ಮಲೇರಿಯಾ ಲಕ್ಷಣವಾಗಿದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ನೀರಿನ ಸಂಗ್ರಹಗಳ ಪರಿಕರಗಳ ಮೇಲೆ ಮುಚ್ಚಳಿಕೆ ಹಾಕಬೇಕು ಸುತ್ತಮುತ್ತ ಪರಿಸರ ಸ್ವಚ್ಛತೆಯಿಂದ ರೋಗಗಳ ತಡೆಯಬಹುದು. ಘನತಾಜ್ಯ ಕಸ ವಿಲೇವಾರಿ ಮಾಡಬೇಕು ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಬೇಕು ಸೊಳ್ಳೆ ನಿರೋಧಕ ಸೊಳ್ಳೆ ಪರದೆ ಉಪಯೋಗಿಸ ಬೇಕು ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಮ್ಮ ಮನೆಗೆ ಬಂದಾಗ ನಿಖರ ಮಾಹಿತಿ ನೀಡಿ ಸಹಕರಿಸ ಬೇಕು ಯಾವುದೇ ತರಹದ ಜ್ವರ ಕಾಣಿಸಿದರೆ ರಕ್ತ ಲೇಪನ ಪರೀಕ್ಷೆ ಮಾಡಿಸಬೇಕು ಭಯ ಬೇಡ ಮಲೇರಿಯಾ ಪರೀಕ್ಷೆ ಚಿಕಿತ್ಸೆ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿರುತ್ತದೆ ಮಲೇರಿಯಾ ನಿಯಂತ್ರಣ ನಮ್ಮ ಕೈಯಲ್ಲಿದೆ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆ ಮೂಲಕ ಆರೋಗ್ಯ ಸಲಹೆ ಪಡೆದು ಕೊಳ್ಳಬಹುದು ಎಂದರು. ಗ್ರಾಮದಲ್ಲಿ ಜ್ವರ ಪ್ರಕರಣಗಳು ಸಮೀಕ್ಷೆ ಮಾಡಿ ಸಂಶಯು ಮಲೇರಿಯಾ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳಿಸಲಾಯಿತು. “ವಿಶ್ವ ಮಲೇರಿಯಾ ದಿನ” ಜನ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಗ್ರಾಮದ ಮುಖಂಡರು ಯುವಕರು ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ಧರು.