ಗಿಡಗಳಿಗೆ ತಂತಿ ಕಟ್ಟುವುದರ ವಿರುದ್ಧ ಕ್ರಮಕ್ಕೆ – ಅಮರೇಗೌಡ ಮಲ್ಲಾಪುರ ಒತ್ತಾಯ.
ಸಿಂಧನೂರು ಏ.24

ನಗರದಾದ್ಯಂತ ರಸ್ತೆ ಬದಿಯಲ್ಲಿರುವ ಗಿಡ ಮರಗಳಿಗೆ ತಂತಿ ಕಟ್ಟಿ ಗಿಡಗಳಿಗೆ ಹಾನಿ ಮಾಡುವವರ ವಿರುದ್ಧ ಅರಣ್ಯ ಅಧಿಕಾರಿಗಳು ನಗರ ಸಭೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸ ಬೇಕು ಎಂದು ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ಒತ್ತಾಯಿಸಿದರು.ಸಿಂಧನೂರು ನಗರದಾದ್ಯಂತ ಬ್ಯಾನರ್ ಗಳನ್ನು,ಲೈಟಿಂಗ್ ಗಳು, ಹಾಗೂ ತಮ್ಮ ಅಂಗಡಿ ಬೋರ್ಡಗಳನ್ನು ಕಟ್ಟುವ ಮೂಲಕ ಗಿಡ ಮರಗಳಿಗೆ ತಂತಿ ಬಿಗಿದು ಗಿಡಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಇದರಿಂದ ಗಿಡ ಮರಗಳ ಬೆಳವಣಿಗೆ ಕುಂಠಿತ ಗೊಳ್ಳುತ್ತಿವೆ. ಅರಣ್ಯ ಅಧಿಕಾರಿಗಳು ಇದರ ವಿರುದ್ಧ ಕೂಡಲೇ ಕ್ರಮ ಜರುಗಿಸ ಬೇಕು ಮತ್ತು ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ಸಿಂಧನೂರು ನಗರದಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಸಾರ್ವಜನಿಕರು ನೆರಳನ್ನು ಹುಡುಕಿ ಕೊಂಡು ಹೋಗಿ ಕುಳಿತು ಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಲಿದೆ. ನೀರಿಗೆ ಅಹಾಕಾರ ಪಡುವ ಪರಿಸ್ಥಿತಿ ಉಲ್ಬಣ ಗೊಲ್ಲಬಹುದು. ದಯವಿಟ್ಟು ಅರಣ್ಯ ಅಧಿಕಾರಿಗಳು ಹಾಗೂ ನಗರ ಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಈತರ ಗಿಡಗಳಿಗೆ ತಂತಿ ಕಟ್ಟುವುದನ್ನು ನಿಲ್ಲಿಸ ಬೇಕು ಮತ್ತು ತಂತಿ ಕಟ್ಟುವವರಿಗೆ ಎಚ್ಚರಿಕೆ ನೀಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ಅಗ್ರಹಿಸಿದರು ಎಂದು ವರದಿಯಾಗಿದೆ.