ನಗರದಲ್ಲಿ ಹಜರತ್ ರಹಿಮಾನ ಶ್ಯಾವಲಿ ಶರಣರ ಉರುಸು – ಕುರಿತು ಪೂರ್ವಭಾವಿ ಸಭೆ.
ನರೇಗಲ್ ಮೇ.11

ಗಜೇಂದ್ರಗಡ ತಾಲೂಕಿನ ನರೇಗಲ್ಲ ನಗರದಲ್ಲಿ ಹಜರತ್ ರಹಿಮಾನ ಶ್ಯಾವಲಿ ಶರಣರ ಉರುಸು 21-5-2025 ರಿಂದ 23-5-2025 ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ಈ ಉರುಸು ಹಜರತ್ ಅಬ್ದುಲ್ ರಹಿಮಾನ್ ಶ್ಯಾವಲಿ ಗಳವರ ಕರಸಂಜಾತರಾದ ಹಜರತ್ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಗಳವರ ಅಮೃತ ಹಸ್ತದಿಂದ ನೆರವೇರುವದು.

ಈ ಧಾರ್ಮಿಕ ಕಾರ್ಯಕ್ರಮವು ಸತತವಾಗಿ 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಇದೆ ಸಮಯದಲ್ಲಿ ಪೊಲೀಸ್ಅಧಿಕಾರಿಗಳು ಹಾಗೂ ಹಲವಾರು ಗಣ್ಯ ಮಾನ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಪೂರ್ವಭಾವಿ ನರೇಗಲ್ಲನ ಎಲ್ಲಾ ವಾರ್ಡಿನ ಗಣ್ಯ ಮಾನ್ಯರು ಹಾಗೂ ಎಲ್ಲಾ ಮತ ಭಾಂಧವರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ