ವಿಜೃಂಭಣೆಯಿಂದ ನಡೆದ ವೀರಭದ್ರಶ್ವರ – ಜಾತ್ರಾ ಮಹೋತ್ಸವ.
ಬೆಳವಣಿಕಿ ಮೇ.13





ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಶ್ರೀ ವೀರಭದ್ರಶ್ವರ ರಥೋತ್ಸವವು ಸಾವಿರಾರು ಭಕ್ತರ ಮಧ್ಯೆ ವಿಜ್ರಂಭಣೆಯಿಂದ ಜರುಗಿತು. ಬೆಳಗಿನ ಜಾವ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿಗೆ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಅಲಂಕಾರ ನಂತರ ಪಲ್ಲಕ್ಕಿ ಉತ್ಸವ ಸುಮಂಗಲಿಯರಿಂದ ಕುಂಬ ಮೆರವಣಿಗೆ ಮತ್ತು ತೆರಿನ ಕಳಸ, ಹಗ್ಗದ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರಗಿತು ಹಾಗೂ ಸಮೂಹಿಕ ವಿವಾಹ ಕಾರ್ಯಕ್ರಮ ನಡೆದವು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತುಗ್ರಾಮದ ಸುತ್ತಮುತ್ತಲಿನ ಎಲ್ಲಾ ಭಕ್ತಾದಿಗಳು ಮತ್ತು ಗ್ರಾಮದ ಭಕ್ತರು ಸಂತೋಷದಿಂದ ತಮ್ಮ ಕೋರಿಕೆ ಈಡೇರಲೆಂದು ಎಂದು ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಆಗಮಿಸಿದ್ದರು. ಸಂಜೆ 5:30 ಕ್ಕೆ ಸಾವಿರಾರು ಭಕ್ತರು ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ತೆಂಗಿನಕಾಯಿ, ನಿಂಬೆಹಣ್ಣು ಅರ್ಪಿಸಿದರು. ಈ ಸಮಯದಲ್ಲಿ ಪುಟ್ಟರಾಜ್ ಬ್ಯಾಂಜೊ ಹಚ್ಚುವ ಮೂಲಕ ಮತ್ತು ಕೋಲಾಟ ಡೊಳ್ಳು ಕುಣಿತ ಟ್ಯಾಕ್ಟರ್ ಗಳ ಮೂಲಕ ಗ್ರಾಮದ ವೀರಭದ್ರಶ್ವರ ರಥೋತ್ಸವಕ್ಕೆ ಗ್ರಾಮದ ಯುವಕರು ಹೂವಿನ ಹಾರ ಹಾಕುವ ಮೂಲಕ ಶ್ರೀ ವೀರಭದ್ರೇಶ್ವರ ಜಾತ್ರೆಯನ್ನು ವಿಜ್ರಂಭಣೆಯಿಂದ ನೆರವೇರಿಸಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ