ತಾಲೂಕ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ – ಪ್ರಗತಿ ಪರಿಶೀಲನಾ ಸಭೆ.

ರೋಣ ಮೇ.14

ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ತಾಲೂಕಿನ ಯಾವುದೇ ವ್ಯಕ್ತಿ ಯೋಜನೆಯ ಲಾಭ ಪಡೆಯದೆ ಇದಲ್ಲಿ ಅಂತವರನ್ನು ಗುರುತಿಸಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ವೆ ಕೈಗೊಂಡು ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಮಿಥುನ ಪಾಟೀಲ ತಿಳಿಸಿದರು.ಪಟ್ಟಣದ ತಾಲೂಕ ಪಂಚಾಯತಿಯಲ್ಲಿ ಇರುವ ಗ್ಯಾರಂಟಿ ಕಾರ್ಯಾಲಯದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಕೂಡಾ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ವೆ ಮಾಡಲು ನೇಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಸರ್ವೆ ಮಾಡಿ ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರ ಬಗ್ಗೆ ಪರಿಶೀಲನೆ ಮಾಡಬೇಕು, ಗ್ಯಾರಂಟಿ ಯೋಜನೆಗಳು ಇನ್ನೂ ತಲುಪದಿದಲ್ಲಿ. ತಲುಪದೇ ಇರಲು ಕಾರಣವನ್ನು ಕಂಡು ಹಿಡಿದು ಪರಿಶೀಲಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನ ಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸದ್ಯ ರೇಶನ್ ಕಾರ್ಡಗಳನ್ನು ಪ್ರಾರಂಭಿಸಿದ್ದು ಅದರ ಕಾಲಾವಧಿಯನ್ನು ಜನರಿಗೆ ತಿಳಿಯುವಂತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.ರೋಣ ತಾಲೂಕಿನಲ್ಲಿ ಗೃಹ ಲಕ್ಷಿ ಯೋಜನೆಯಡಿ 36857 ಅರ್ಜಿಗಳು ನೊಂದಣಿಯಾಗಿದ್ದು ಅದರಲ್ಲಿ 36183 ಮಂಜೂರಾತಿ ಆಗಿವೆ ಅದರಲ್ಲಿ 674 ಮಂಜೂರಾತಿಗೆ ಬಾಕಿ ಉಳದಿವೆ ಅವರನ್ನು ಗುರುತಿಸಿ ಅವರಿಗೆ ಗೃಹ ಲಕ್ಷ್ಮಿ ಗೆ ಸೇರಿಸಿ ಶೇಕಡಾ 98.17 ಪ್ರಗತಿ ಸಾಧಿಸಿದೆ. ಮುಖ್ಯವಾಗಿ 171 ಗೃಹ ಲಕ್ಷೀ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮರಣ ಪತ್ರ ತೆಗೆದುಕೊಂಡು ಅವರ ಹೆಸರನ್ನು ಕಡಿಮೆ ಮಾಡಲು ಹೇಳಿದರು.ಗೃಹ ಜ್ಯೋತಿ ಯೋಜನೆಯಡಿ ರೋಣ ಉಪ ವಿಭಾಗದಲ್ಲಿ ಒಟ್ಟು ಸಂಪರ್ಕ ಇದ್ದ ಸಂಖ್ಯೆ 43272 ಸ್ಥಾವರಗಳು ಅದರಲ್ಲಿ 22268 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದು 1380 ಯೋಜನೆಯ ಲಾಭ ಪಡೆದಿಲ್ಲಾ ಇದನ್ನು ಕೂಡಾ ಸರ್ವೆ ಮಾಡಿ ಎಂದರು.ಯುವನಿಧಿ ಯೋಜನೆಯಡಿ ರೋಣ ತಾಲೂಕಿನಲ್ಲಿ 753 ಫಲಾನುಭವಿಗಳ ನೋಂದಣಿಯಾಗಿದ್ದು 448 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 13,30,500 ರೂ. ವರ್ಗಾವಣೆ ಯಾಗಿರುತ್ತದೆ ಎಂದು ಸಂಭಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ, ಗ್ಯಾರಂಟಿ ಸಮಿತಿಯ ಸದಸ್ಯರು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಿತ ಅಧಿಕಾರಿಗಳು ಸೇರಿದಂತೆ ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button