ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಪಡಿತರ ದೊರೆತು ಆಹಾರ ಭದ್ರತೆ ಹೊಂದುವಂತೆ ನಿಗಮದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು – ರವೀಂದ್ರನಾಥ ದಂಡಿನ.
ರೋಣ ಮೇ.20

ಪಟ್ಟಣದ ಕನಕದಾಸ ಶಿಕ್ಷಣ ಸಮಿತಿಯ ಕೆ.ಎಸ್.ಎಸ್ ಮಹಾವಿದ್ಯಾಲಯ ಹಾಗೂ ಶರಣಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶರಣಬಸವೇಶ್ವರ ಪ್ರೌಢ ಶಾಲೆ ವತಿಯಿಂದ ಸೋಮವಾರ ನಡೆದ ಸನ್ಮಾನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭಾರತೀಯ ಆಹಾರ ನಿಗಮವು ಪಡಿತರ ವಿತರಣೆಯಲ್ಲಿ ದಕ್ಷತೆಯ ನಿರ್ವಹಣೆ ಹೆಚ್ಚಿಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೆಜಿಗೆ ₹28 ರಂತೆ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಗೆ 2.36 ಲಕ್ಷ ಟನ್ ಅಕ್ಕಿ ಪೂರೈಕೆಗೆ ಕಳೆದ ಆಗಸ್ಟ್‌ನಲ್ಲಿಯೇ ಒಪ್ಪಿಗೆ ನೀಡಿದ್ದು ಅಂದಾಜು ನಾಲ್ಕು ಕೋಟಿ ಜನಕ್ಕೆ ಕೇಂದ್ರ ಸರ್ಕಾರ ಪಡಿತರ ಧಾನ್ಯ ವಿತರಿಸುತ್ತಿದೆ. ಮುಂಬರುವ ದಿನ ಮಾನಗಳಲ್ಲಿ ಆಹಾರ ನಿಗಮದ ವತಿಯಿಂದ ಪಡಿತರ ವಿತರಣೆಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಪಡಿತರ ದೊರೆತು ಆಹಾರ ಭದ್ರತೆ ಹೊಂದುವಂತೆ ನಿಗಮದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.ದೇಶದಲ್ಲಿ ಹಸಿವು ಮುಕ್ತ ವಾತಾವರಣ ನಿರ್ಮಿಸಲು ಕೇಂದ್ರ ಹಲವು ಕ್ರಮಗಳನ್ನು ಕೈಗೊಂಡಿದ್ದು ದೇಶದ ಪ್ರತಿ ಪ್ರಜೆಗೂ ಆಹಾರ ಭದ್ರತೆ ಒದಗಿಸುವುದು ಕೇಂದ್ರ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಎಂದು ಭಾರತೀಯ ಆಹಾರ ನಿಗಮದ ನೂತನ ನಿರ್ದೇಶಕ ರವೀಂದ್ರನಾಥ ದಂಡಿನ ಹೇಳಿದರು.ಈ ಸಮಯದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಸ್ಥಾನಿಕ ಮುಖ್ಯಸ್ಥ ಐ.ಬಿ ದಂಡಿನ, ಬಸವರಾಜ ಬಿಂಗಿ, ಎಸ್.ಎಸ್.ಬಿ.ಪಿ.ಯು ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಎ.ಎಚ್ ನಾಯ್ಕರ, ಹಾಗೂ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರ ಸಿ.ಬಿ ಪೊಲೀಸ ಪಾಟೀಲ್, ಶರಣಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವೈ.ಎಸ್ ಕುರಿ, ಉಪನ್ಯಾಸಕರಾದ ವೀರೇಶ ಕಲಮಗಿರಿ, ಎಂ.ಎಚ್ ನಾಯ್ಕರ, ಎಸ್.ಎ ನದಾಫ್, ಕೆ.ಕೆ ಹಿರೇಕಲ್ಲಪ್ಪನವರ, ಲಲಿತಾ ನಂದೆಪ್ಪಗೌಡ್ರ, ಪ್ರಶಾಂತ್ ಇಟಗಿ, ಓಲೇಕಾರ್, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ