ಸಿ.ಜೆ.ಐ ಅವರ ಮೇಲೆ ಶ್ಯೂ ಎಸೆತ ಖಂಡಸಿ ದೇವರ ಹಿಪ್ಪರಗಿಯಲ್ಲಿ – ಬೃಹತ್ ಪ್ರತಿಭಟನೆ ಹಾಗೂ ರ್ಯಾಉಲಿ ಜರುಗಿತು.
ದೇವರ ಹಿಪ್ಪರಗಿ ಅ.13





ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಬಿ.ಆರ್ ಗವಾಯಿ ಯವರ ಮೇಲೆ ಶ್ಯೂ ಎಸೆದ ಘಟನೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಕರ್ನಾಟಕ ದಲಿತ ಸಂಘಷ ಸಮಿತಿ ಹಾಗೂ ತಾಲ್ಲೂಕು ಸಮಾನ ಮನಸ್ಸುಗಳು ಒಕ್ಕೂಟದಿಂದ ನಡೆದ ಪ್ರತಿಭಟನೆಯನ್ನು ಹಜರತ ಟಿಪ್ಪು ಸುಲ್ತಾನ್ ವೃತ್ತದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ಹಾಗೂ ರ್ಯಾಲಿ ಮುಖಾಂತರ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ವೃತ್ತದ ಹತ್ತಿರ ಬಹಿರಂಗ ಸಭೆ ಮಾಡಿ ದೇವರ ಹಿಪ್ಪರಗಿ ತಹಶೀಲ್ದಾರರಾದ ಪ್ರಕಾಶ ಸಿಂದಗಿ ಯವರ ಮುಖಾಂತರ ಮಾನ್ಯ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು. ಭಾರತ ದೇಶ ಬಹುದೊಡ್ಡದಾದ ಲಿಖಿತವಾದ ಸಂವಿಧಾನ ಜಾರಿಗೆ ಬಂದ ಸುಮಾರು ೭೬ ವರ್ಷಗಳು ಗತಿಸಿದವು ಆದರೂ ಕೂಡಾ ರಾಷ್ಟ್ರನಾಯಕರು ಮೇಲೆ ರಾಷ ಧ್ವಜ ಮೇಲೆ ರಾಷ್ಟ್ರ ಲಾಂಛನಗಳ ಮೇಲೆ ಅವಮಾನ ಗೊಳಿಸುವುದು ರೂಢಿ ಯಾಗಿದೆ. ಹಾಗೂ ಇದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನ ಅಡಿಯಲ್ಲಿರೋಧ ತೆರೆಯಲ್ಲಿ ನಡೆಯುತ್ತಾ ಬಂದಿದೆ ಭಾರತ ದೇಶದ ವಿವಿಧ ಧರ್ಮಗಳು ವಿವಿಧ ಜಾತಿಗಳು ವಿವಿಧ ಸಂಸ್ಕೃತಿಗಳು ಹಾಗೂ ಆಚಾರ ವಿಚಾರಗಳನ್ನು ಅಳವಡಿಸಿ ಕೊಂಡು ಸೌಹಾರ್ದತೆ ಯಿಂದ ಬದುಕುತ್ತಿರುವ ದೇಶ ಇದಕ್ಕೆ ಪೂರಕವಾಗಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ನೀಡಿದ ಸಂವಿಧಾನದಲ್ಲಿ ಎಲ್ಲರೂ ಗೌರವದಿಂದ ಬದುಕುಲು ಅವಕಾಶಗಳನ್ನು ಕಲ್ಪಿಸಿದ್ದಾರೆ ಜಾತ್ಯತೀತ ಕಲ್ಪನೆಯನ್ನು ಸಹಿಸಲಾರದೆ ಮನುವಾದಿಗಳು ಆಗ್ಗಾಗ್ಗೆ ಸಂವಿಧಾನದ ಆಶಯಗಳಿಗೆ ಭಂಗ ತರುವ ತಂತ್ರಗಳು ನಡೆಯುತ್ತಿರುವುದು ಖಂಡನೀಯ. ಮೊನ್ನೆ ದಿ:- ೦೬/೧೦/೨೦೨೫ ರಂದು ಸುಪ್ರೀಂ ಕೋರ್ಟ್ನ ನ್ಯಾಯಾಲಯ ಸಂವಿಧಾನದ ಪ್ರಮುಖ ಕಂಬ ನ್ಯಾಯಾಂಗದ ಮೇಲೆ ಒಬ್ಬ ಮನುವಾದಿ ರಾಕೇಶ್ ಕಿಶೋರ್ ಎಂಬ ನ್ಯಾಯವಾದಿ ಸೋಗಿನ ಭಯೋತ್ಪಾದಕ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಬಿ.ಆರ್ ಗವಾಯಿ ಯವರ ಮೇಲೆ ತನ್ನ ಕಾಲಿನ ಶ್ಯೂ ಎಸೆದಿರುವುದು ಭಾರತದ ಸಂವಿಧಾನಕ್ಕೆ ಅವಮಾನಸಿದಂತೆ ಯಾಗಿದೆ.

ಈ ಭಯೋತ್ಪಾದನೆಯ ಘಟನೆಯನ್ನು ಖಂಡಿಸುವ ಮೂಲಕ ಸದರಿ ಕೋಮುವಾದಿ ಹಾಗೂ ದೇಶ ದ್ರೋಹ ಗುಂಡಾ ವಕೀಲನಿಗೆ ಯಾವುದೇ ಜಾಮೀನಗೆ ಅವಕಾಶ ವಿಲ್ಲದ ಕಾಯ್ದೆಯ ಮೂಲಕ ತಕ್ಷಣ ಪ್ರಮಾಣ ಪತ್ರ ಗಳನ್ನು ಮುಟ್ಟುಗೋಲು ಹಾಕಿಕೊಂಡು ಭಾರತ ಸರ್ಕಾರ ಫೋಟಾ ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಕಾನೂನು ಅಡಿಯಲ್ಲಿ ಗಡಿಪಾರ ಆದೇಶ ಮಾಡಬೇಕು ಅವರು ಸಮಗ್ರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು, ಸಂವಿಧಾನ ಆಶಯ ಗಳಿಗೆ ಭಂಗ ಬಾರದ ರೀತಿಯಲ್ಲಿ ಪ್ರಭುತ್ವ ಕ್ರಮ ಜರುಗಿಸಿ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು, ಆದೆ ರೀತಿಯಾಗಿ ಮಧ್ಯ ಪ್ರದೇಶದ ಹೈಕೋರ್ಟ್ ನ ವಕೀಲ ಸಂಘದ ಮಾಜಿ ಅಧ್ಯಕ್ಷನಾದ ಅಮೀತ ಮಿಶ್ರಾ ಡಾ, ಬಾಬಾ ಸಾಹೇಬ್ ಅಂಬೇಡ್ಕರ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಆತನನ್ನು ದೇಶದ್ರೋಹ ಫೋಟಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಆತನನ್ನು ಕೂಡಲೇ ಗಡಿಪಾರು ಮಾಡಬೇಕು, ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಕಾಶ ಗುಡಿಮನಿ ಯವರು ಮಾತನಾಡಿದರು. ಹಾಗೂ ಈ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಮುಖಂಡರಾದ ರಾವುತ ತಳಕೇರಿ ಹುಯೋಗಿ ತಳ್ಳೋಳ್ಳಿ ಲಕ್ಕಪ್ಪ ಬಡಿಗೇರ ರಾಜಕುಮಾರ ಸಿಂದಗೇರಿ ಇನ್ನೂ ಹಲವಾರು ಮುಖಂಡರು ಮಾತನಾಡಿದರು, ಈ ಪ್ರತಿಭಟನೆ ಹಾಗೂ ರ್ಯಾಲಿ ಭಾಗವಹಿಸಿದ ಮಲ್ಲಕಪ್ಪ ಬಾಗೇವಾಡಿ ಶಿವಾನಂದ ವಾಲಿಕಾರ ಅಶೋಕ ಗುಡಸಲಮನಿ ಪರಸುರಾಮ ಬಡಿಗೇರ ಬೀರು ಹಳ್ಳಿ ಗುರುನಾಥ ಮುರಡಿ ಬಸವರಾಜ ತಳಕೇರಿ ಶರಣು ಜಮಖಂಡಿ ಶಿವಾನಂದ ಹೂಸಮನಿ ಚಂದ್ರ ಕಡಕೋಳ ರಾಘವೇಂದ್ರ ಗುಡಿಮನಿ ದಾದಾ ಶಾಪೂರ ನಮೀನ್ ಗತ್ತೇದಾರ ಮುನ್ನ ಮಳಖೇಡ ಬಸವರಾಜ ಇಂಗಳಗಿ ಸುನಿಲ್ ಮಾಗಿ ಸಾಯಬಣ್ಣ ದಳಪತಿ ದೇವೇಂದ್ರ ದೊಡ್ಡ ಮನಿ ಶಿವಾರಾಜ ತಳವಾರ ಹಾಗೂ ತಾಲ್ಲೂಕಿನ ಎಲ್ಲಾ ಹಳ್ಳಿಯ ಮುಖಂಡರು ಹಾಗೂ ಸಾರ್ವಜನಿಕರು ಈ ಪ್ರತಿಭಟನೆ ಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ