ಜಿ.ಪಂ. ಸಿ.ಇ.ಓ ಪ್ರತೀಕ್ ಬಾಯಲ್ ರವರ – ಮತ್ತೊಂದು ಕರ್ಮಕಾಂಡ!!!.
ಉಡುಪಿ ಸ.10





2024-25 ನೇ. ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತ್ವರಿತ ಸೇವಾ ಪೂರೈಕೆ, ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದೆಂದು ಘೋಷಿಸಿದ್ದಂತೆ ಸರ್ಕಾರ ಕಳೆದ ಜೂನ್ 25 ರಂದು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿ ಇದೀಗ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ನಡೆಸಲಾಗುತ್ತಿದೆ.
ಬಹುಶ: ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಲ್ಲದೇ ಬೇರೆ ಯಾರೇ ಸಚಿವರಾಗಿದ್ದರೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಕಷ್ಟ ಸಾದ್ಯವಾಗುತ್ತಿತ್ತು. ಏಕಂದರೆ ಬಹುತೇಕ ಶಾಸಕರು, ಸಚಿವರುಗಳ ಪಿ.ಎ ಗಳಾಗಿ ಪಿ.ಡಿ.ಓ ಗಳೇ ನೇಮಕ ಗೊಂಡಿರುವುದರಿಂದ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಗೆ ಹಿನ್ನಡೆ ಯಾಗುವ ಸಾದ್ಯತೆ ಇತ್ತು.
ಸಚಿವರಾದ ಪ್ರಿಯಾಂಕ್ ಖರ್ಗೆಯವರು ಯಾರ ಒತ್ತಡಕ್ಕೂ ಮಣಿಯದೇ ಇದೇ ಪ್ರಥಮ ಬಾರಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಯನ್ನು ಜಾರಿ ಗೊಳಿಸಿ ನೌಕರರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂಬುದಾಗಿ ನೌಕರರು ಮತ್ತು ನೌಕರರ ಪೋಷಕ ವರ್ಗದವರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅತ್ಯಂತ ಕ್ಷಿಷ್ಟಕರವಾದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಯನ್ನು ಜಾರಿ ಗೊಳಿಸಿರುವುದು ಸಚಿವರಾದ ಪ್ರಿಯಾಂಕ್ ಖರ್ಗೆಯವರ ಬದ್ದತೆ ಮತ್ತು ದಕ್ಷತೆಯನ್ನು ತೋರಿಸುತ್ತದೆ.
ಆದರೆ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಇದಕ್ಕೆ ತದ್ವಿರುದ್ದವಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಗೊಂಡ ನೌಕರರನ್ನು ಸರಕಾರದ ನೀತಿ ನಿಯಮಗಳಿಗೆ ವಿರುದ್ದವಾಗಿ ನಿಯೋಜನೆ ಮಾಡಲಾಗುತ್ತಿದೆ.
ಉದಾ:- ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ಗೆ ಕಾರ್ಯದರ್ಶಿಯಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಗೊಂಡ ನೌಕರರನ್ನು ಕೆಲವೇ ದಿನಗಳಲ್ಲಿ ಹೆಮ್ಮಾಡಿಗೆ ನಿಯೋಜನೆ ಮಾಡಿ ನಂತರ ಹೆಮ್ಮಾಡಿ ಕಾರ್ಯದರ್ಶಿ ಯವರನ್ನು ಉಪ್ಪುಂದ ಗ್ರಾಮ ಪಂಚಾಯತ್ ಗೆ ನಿಯೋಜನೆ ಮಾಡಿರುವುದು ಮತ್ತು ಅದೇ ಕಾರ್ಯದರ್ಶಿಯನ್ನು ಪುನ: ಹೆಮ್ಮಾಡಿ ಗ್ರಾಮ ಪಂಚಾಯತ್ ಗೆ ನಿಯೋಜನೆ ಮಾಡಿ ಉಪ್ಪುಂದ ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯನ್ನು ತಾಲೂಕು ಪಂಚಾಯತ್ ಗೆ ನಿಯೋಜನೆ ಮಾಡಿರುವುದು ಉಡುಪಿ ಜಿಲ್ಲಾ ಪಂಚಾಯತ್ ನ ಸಿ.ಇ.ಓ ರವರ ಬೇಜವಾಬ್ದಾರಿತನದ ಪರಮಾಧಿಯ ನೆಡೆಯಾಗಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದೆಡೆ ಕಾಪು ತಾಲೂಕಿನ ಬಡಾ ಗ್ರಾಮ ಪಂಚಾಯತ್ ನ ಲೆಕ್ಕ ಸಹಾಯಕಿಯಾದ ನಿರ್ಮಲಾ ಶೆಟ್ಟಿ ಇವರನ್ನು ಕೌನ್ಸಿಲಿಂಗ್ ಮೂಲಕ ಅದೇ ತಾಲೂಕಿನ ಹೆಜಮಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿದ್ದು, ಇವರನ್ನು ಸಹ ಕೆಲವೇ ದಿನಗಳಲ್ಲಿ ಪುನ: ಬಡಾ ಗ್ರಾಮ ಪಂಚಾಯತ್ ಗೆ ನಿಯೋಜನೆ ಮಾಡಲಾಗಿದೆ. ಕಳೆದ ಹದಿಮೂರು ವರ್ಷಗಳಿಂದ ಕಾಪು ತಾಲೂಕಿನ ಬಡಾ ಗ್ರಾಮ ಪಂಚಾಯತ್ ನಲ್ಲಿ ಸತತವಾಗಿ ಒಂದೇ ಕಡೇ ಠಿಕಾಣಿ ಹೂಡಿದ್ದ ಲೆಕ್ಕ ಸಹಾಯಕಿಯನ್ನು ಹೆಜಮಾಡಿ ಗ್ರಾಮ ಪಂಚಾಯತ್ ಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಗೊಂಡಿರುವ ಪ್ರಕ್ರಿಯೆಯ ಕುರಿತು ಸ್ಥಳೀಯ ಗ್ರಾಮಸ್ಥರು ಇಲಾಖೆಯ ಸಚಿವರನ್ನು ಪ್ರಶಂಸೆ ಮಾಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿಯಾಗಿ ಪುನ: ಕೆಲವೇ ದಿನಗಳಲ್ಲಿ ಮತ್ತದೇ ಬಡಾ ಗ್ರಾಮ ಪಂಚಾಯತ್ ಗೆ ಮರು ನಿಯೋಜನೆ ಮಾಡಿಸಿ ಕೊಳ್ಳುತ್ತಾರೆಂದರೆ ಇದರಲ್ಲೇ ಸ್ಪಷ್ಟವಾಗಿ ಅರ್ಥವಾಗುತ್ತದೆ ಬಡಾ ಗ್ರಾಮ ಪಂಚಾಯತ್ ಶ್ರೀಮಂತ ಪಂಚಾಯತ್ ಗಳಲ್ಲಿ ಒಂದಾಗಿದ್ದು ಅಲ್ಲಿ ಹಣ ಮಾಡುವ ಉದ್ದೇಶದಿಂದ ಪುನ: ಅದೇ ಗ್ರಾಮ ಪಂಚಾಯತ್ ಗೆ ಹಿರಿಯಅಧಿಕಾರಿಗಳಿಗೆ ಲಂಚಾ ನೀಡಿ ನಿಯೋಜನೆ ಮಾಡಿಸಿ ಕೊಂಡಿರುವುದಾಗಿ ಉಡಾಫೆ ಯಿಂದ ವರ್ತಿಸುತ್ತಾ ನನ್ನನ್ನು ಬಡಾ ಪಂಚಾಯತ್ ನಿಂದ ಯಾರೂ ವರ್ಗಾವಣೆ ಮಾಡಿಸಲು ಸಾದ್ಯವಾಗುವುದಿಲ್ಲ ಮತ್ತು ನಾನು ಇದೇ ಪಂಚಾಯತ್ ನಲ್ಲಿ ಮುಂದುವರೆಯುವುದಾಗಿ ಮತ್ತು ಪಿ.ಡಿ.ಓ ಗಿಂತ ನಾನೇ ಸೀನಿಯರ್ ಆಗಿದ್ದು, ನಿವೃತ್ತಿ ಯಾಗುವ ವರೆಗೂ ಇದೇ ಪಂಚಾಯತ್ ನಲ್ಲಿ ಮುಂದುವರಿಯುವುದಾಗಿ ಬಡಾಯಿ ಕೊಚ್ಚಿ ಕೊಳ್ಳುತ್ತಾಳೆ ಮತ್ತು ಇವರು ಇತ್ತೀಚಿಗೆ ಅಕ್ರಮ ಸಂಪತ್ತಿನಿಂದ ಐಷರಾಮಿ ಬಂಗಲೆ ಕಟ್ಟಿಸಿರುವುದಾಗಿ ಸ್ಥಳೀಯ ಗ್ರಾಮಸ್ಥರು ಗುಸು ಗುಸು ಮಾತಾಡಿ ಕೊಳ್ಳುತ್ತಿದ್ದಾರೆ ಎಂದು ಸುದ್ದಿ ಆಗಿದೆ.
ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಆಯಾ ಕಟ್ಟಿನ ಸ್ಥಳಗಳಲ್ಲಿ ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಅಧಿಕಾರಿಗಳನ್ನು ಇದೇ ಪ್ರಥಮ ಬಾರಿಗೆ ಕೌನ್ಸಿಲಿಂಗ್ ಮೂಲಕ ಕಡ್ಡಾಯ ವರ್ಗಾವಣೆ ಗೊಳಿಸಿದ್ದ ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಉಡುಪಿ ಜಿಲ್ಲಾ ಪಂಚಾಯತ್ ನ ಸಿ.ಇ.ಓ ಪ್ರತೀಕ್ ಬಾಯಲ್ ರವರು ಇಂತಹ ಹಲವಾರು ಪ್ರಕರಣಗಳಲ್ಲಿ ತಮ್ಮದೇ ಶೈಲಿಯಲ್ಲಿ ಬೇಕಾಬಿಟ್ಟಿ ವರ್ಗಾವಣೆ/ನಿಯೋಜನೆ ಮಾಡುತ್ತಿರುವುದನ್ನು ಜಿಲ್ಲೆಯ ಶಾಸಕರು / ಸಂಸದರು / ಉಸ್ತುವಾರಿ ಸಚಿವರು, ಇತರೆ ಸ್ಥಳೀಯ ಜನ ಪ್ರತಿನಿಧಿಗಳು ಸಿ.ಇ.ಓ ರವರ ನಡೆಯನ್ನು ಪ್ರಶ್ನೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಇವರ ಕಾನೂನು ಬಾಹಿರ ವರ್ಗಾವಣೆ / ನಿಯೋಜನೆ ವಿರುದ್ದ ಇಲಾಖೆಯ ಸಚಿವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಶಿಸ್ತು ಕ್ರಮ ಜರುಗಿಸುವಂತೆ ದೂರು ಸಲ್ಲಿಸುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್ ನ ಇದರಲ್ಲಿ ಎರಡು ಮಾತಿಲ್ಲದೆ ಸಾರ್ವಜನಿಕರ ನಿತ್ಯ ನಿರಂತರವಾಗಿ ಬುದ್ಧತೆ, ಮತ್ತು ನಿಷ್ಠೆಯಿಂದ ಸದಾ ಕಾಲ ಸಾರ್ವಜನಿಕರ ಜೊತೆ ಇರುತ್ತೆ ಅನ್ನುವುದು ಸ್ಪಷ್ಟಕದಷ್ಟೇ ಸ್ಪಷ್ಟವಾಗಿದೆ.
ವರದಿ :ಆರತಿ.ಗಿಳಿಯಾರು.ಉಡುಪಿ