ಭಾವ ಸಿರಿ ಕವಿ ಕುಲ ತಿಲಕ “ಎಚ್.ಎಸ್ವಿ” ಯವರಿಗೆ ನುಡಿ ನಮನಗಳು…..

ಭಾವ ಸಿರಿ ಕವಿ ಕುಲ ತಿಲಕ ಎಚ್.ಎಸ್ವಿ




ಯವರಿಗೆ ನುಡಿ ನಮನಗಳು
ಕವನ ಕಾದಂಬರಿ ಭಾವ ಗೀತೆ
ಗೀತ ರಚನೆ ಸಂಭಾಷಣೆ ರಂಗ ನಾಟಕ ರಚನೆ
ಅತ್ಯಾದ್ಭುತ
ಸಾಹಿತ್ಯ ಲೋಕದ ಮಿನಗು ನಕ್ಷತ್ರ ಪ್ರಶಸ್ತಿಗಳ
ಸರಮಾಲೆಯ ಗರಿ
ಕರುನಾಡ ಕಿರತಿ ಭಾರತದೆಲ್ಲೆಡೆ ಹರಡಿ
ಕನ್ನಡ ಸಾಹಿತ್ಯ ಲೋಕದಲಿ ಅನವರತ
ಇರಬೇಕು ಇರುವಂತೆ
ಕನ್ನಡ ನಾಡ ನುಡಿ ನೆಲ ಜಲ ಗಂಧದ
ಗುಡಿಯಲಿ”ಎಚ್ ಎಸ್ವಿ” ಅಂಕಿತ ನಾಮದಿ
ಅಮರರಾದಿರಿ
ಸದಾ ನಗು ಮುಖದ ಭಾವದಲಿ ಜನಮನ
ಸೆಳೆದಿರಿ
ಕನ್ನಡ ಕವಿಲೋಕದಲಿ ಅಮರ ನಿಮ್ಮ ನಾಮ
ಕನ್ನಡ ಕುಲಕೋಟಿಗರ ಹೃದಯ ಅಂತರಾಳ
ಕಂಬನಿ ನುಡಿ ನಮನಗಳು
ಮತ್ತೆ ಹುಟ್ಟಿ ಬನ್ನಿ ಮಹೊನ್ನತಭಾವ ಸಿರಿ ಕವಿ
ಕುಲ ತಿಲಕ “ಎಚ್ ಎಸ್ವಿ”

ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.