ಮಕ್ಕಳ ಉಜ್ವಲ ಭವಿಷ್ಯಕ್ಕೆ ಎಲ್ಲರ ಸಹಕಾರ ಅಗತ್ಯ – ಸಂತೋಷ ಚವ್ಹಾಣ.
ಹಿರೇರೂಗಿ ಮೇ.31

‘ಶಾಲೆಗಳು ಮಕ್ಕಳಲ್ಲಿ ಮೌಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಾತ್ರ ಮಗು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ’ ಎಂದು ಹಿರೇರೂಗಿ ಕನ್ನಡ ಕ್ಲಸ್ಟರ್ ಸಿ.ಆರ್.ಪಿ ಸಂತೋಷ ಚವ್ಹಾಣ ತಿಳಿಸಿದರು. ಶುಕ್ರವಾರ ದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ 2025-26 ನೇ. ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸ ಬೇಕು. ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಪಡಿಸಿ ಕೊಳ್ಳಬೇಕು. ವಿದ್ಯಾರ್ಥಿಗಳ ಬದುಕು ಉಜ್ವಲವಾಗಿ ತಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದರು.

ಶಿಕ್ಷಕರಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ ಶಾಲೆಯ ಸವಲತ್ತುಗಳು, ಇಲಾಖೆಯ ಯೋಜನೆಗಳ ಕುರಿತು ವಿವರಿಸಿದರು.ಶಾಲೆಗೆ ಆಗಮಿಸಿದ ಮಕ್ಕಳಿಗೆ ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಗುಲಾಬಿ ಹೂವು ನೀಡಿ ಶಿಕ್ಷಕರೇ ಬರಮಾಡಿ ಕೊಳ್ಳುವ ಮೂಲಕ ವಿಶಿಷ್ಟವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ರಮೇಶ ಮಠಪತಿ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ.ವೈ ಪತ್ತಾರ, ಎಸ್.ಎಸ್ ಅರಬ ಹಾಗೂ ಶಿಕ್ಷಕರಾದ ಎಸ್.ಎಂ ಪಂಚಮುಖಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಜೆ.ಎಂ ಪತಂಗಿ, ಸಾವಿತ್ರಿ ಸಂಗಮದ, ಎಸ್.ಎನ್ ಡಂಗಿ, ಎಸ್.ಬಿ ಕುಲಕರ್ಣಿ, ಎಸ್.ಡಿ ಬಿರಾದಾರ, ಎಫ್.ಎ ಹೊರ್ತಿ, ಎಸ್.ವ್ಹಿ ಬೇನೂರ, ಸುಮಿತ್ರಾ ನಂದಗೊಂಡ, ಎನ್.ಬಿ ಚೌಧರಿ, ಎಸ್.ಪಿ ಪೂಜಾರಿ ಸೇರಿದಂತೆ ಅನೇಕ ಪಾಲಕರು, ಮಕ್ಕಳು ಭಾಗವಹಿಸಿದ್ದರು.