ಸಲೀಂ ಬಾಷಾ ತೂಲಹಳ್ಳಿ ಗ್ರಾಮ ಪಂಚಾಯತಿಯ – ನೂತನ ಅಧ್ಯಕ್ಷರಾಗಿ ಆಯ್ಕೆ.
ತೂಲಹಳ್ಳಿ ಮೇ.31

ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಸಲೀಂ ಬಾಷಾ ಆಯ್ಕೆ ಯಾಗಿದ್ದಾರೆ. ಜಿ.ಕೆ ಅಮರೇಶ್ ಚುನಾವಣೆ ಅಧಿಕಾರಿಯ ನೇತೃತ್ವದಲ್ಲಿ ತೂಲಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ 7 ಮತ ಪಡೆದು ಸಲೀಂ ಬಾಷಾ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಯಾದರು. ಈ ಸಂದರ್ಭದಲ್ಲಿ ಶಕೀರಾ ಬಿ ಉಪಾಧ್ಯಕ್ಷರು ಎಸ್.ಮಹೇಶ್ ಪ್ರತಿಭಾ.ಬಿ ನಾಗಮ್ಮ ಕೆಂಚಮ್ಮ ಪುಷ್ಪ ಸದಸ್ಯರುಗಳು ಹಾಗೂ ಪ್ರಶಾಂತ್ ಕುಮಾರ್ ಪಿಡಿಓ ಮರಿಯಪ್ಪ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು