ಕೊತಬಾಳ ಗ್ರಾಮದಲ್ಲಿ ಅನಾಥ – ಗಂಡು ಶಿಶು ಪತ್ತೆ.

ಕೊತಬಾಳ ಜೂ.07

ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಶುಕ್ರವಾರಅನಾಥ ಗಂಡು ಶಿಶು ಪತ್ತೆಯಾಗಿದೆ. ವಾರಸುದಾರರು ರಾತ್ರಿ ವೇಳೆ ಯಾರು ಇಲ್ಲದ ಸಮಯದಲ್ಲಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಇಟ್ಟು ಹೋಗಿದ್ದಾರೆ. ನಸುಕಿನ ಜಾವ ಹೊಲಕ್ಕೆ ಬಿತ್ತಲು ಹೋಗುತ್ತಿದ್ದ ರೈತರೊಬ್ಬರು ಮಗು ಅಳುವುದನ್ನು ಕೇಳಿ ತಕ್ಷಣ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಗೆ ವಿಷಯ ತಿಳಿಸಿದ್ದಾರೆ. ಆಗ ಕಾರ್ಯಕರ್ತೆಯು ಮಗು ರಕ್ಷಣೆ ಮಾಡಿ ಶಿಶು ಅಭಿವೃದ್ಧಿ ಅಧಿಕಾರಿ ಶಿವಗಂಗಮ್ಮ ಅವರಿಗೆ ವಿಷಯ ತಿಳಿಸಿದ್ದಾರೆ. ಶಿಶು ಅಭಿವೃದ್ಧಿ ಅಧಿಕಾರಿ ಶಿವಗಂಗಮ್ಮ ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಮಗುವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಸಂಪೂರ್ಣ ಆರೋಗ್ಯ ವಂತವಾಗಿದ್ದು, ಈ ಮಗು ಯಾರಿಗೆ ಸೇರಿದ್ದು? ಎಂಬುದು ತಿಳಿಯದ್ದರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆಗೆ ಕಳುಹಿಸಿ ಕೊಡಲಾಗಿದೆ ಎಂದು ತಾಲೂಕಾ ಶಿಶು ಅಭಿವೃದ್ದಿ ಅಧಿಕಾರಿ ಶಿವಗಂಗಮ್ಮ ತಿಳಿಸಿದ್ದಾರೆ.

ಬಾಕ್ಸ್ ಸುದ್ದಿ:-

ನವಜಾತು ಶಿಶುಗಳನ್ನು ಬೀದಿಯಲ್ಲಿ ಬಿಟ್ಟು ಹೋಗುವುದು ಸರಿಯಲ್ಲ. ಮಕ್ಕಳು ಬೇಡವಾಗಿದ್ದರೆ ಅಥವಾ ಸಾಕಲು ಆಗದಿದ್ದರೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದರೆ ಮಗುವನ್ನು ಜಿಲ್ಲಾ ತೊಟ್ಟಿಲು ಕೇಂದ್ರಗಳಲ್ಲಿ ಬೆಳೆಸಲಾಗುವುದು. ಮಗು ಬೇಕು ಎನ್ನುವವರಿಗೆ ದತ್ತು ಕೇಂದ್ರಗಳಿಂದ ಕಾನೂನು ಪ್ರಕಾರ ಕೊಡಲಾಗುವುದು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button