ಕರಾಸ್ತ್ರ” ಚಲನ ಚಿತ್ರ – ಜೂ.13ಕ್ಕೆ ಬಿಡುಗಡೆ.

ಹುಬ್ಬಳ್ಳಿ ಜೂ.10

ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಬ್ಯಾನರ್ ನ ಮೂಲಕ ಪ್ರಪ್ರಥಮ ಕಾಣಿಕೆಯಾಗಿ “ಕರಾಸ್ತ್ರ” ಕನ್ನಡ ಚಲನ ಚಿತ್ರ ಇದೇ ಜೂನ್ 13 ರಂದು ಬಿಡುಗಡೆಗೆ ಯಾಗಲಿದೆ ಎಂದು ನಿರ್ದೇಶಕ ನಟ ಶ್ರೀ ನಾರಾಯಣ ಪೂಜಾರ ಹೇಳಿದರು . ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ಕಲಾವಿದರನ್ನು ಸೇರಿಸಿ ಕೊಂಡು ಈ ಸಿನಿಮಾ ಮಾಡಲಾಗಿದೆ. ದ್ವಾಪರ ಯುಗದಲ್ಲಿ ಆದಂತಹ ಸಮಸ್ಯೆಗೆ ಕಲಿಯುಗದಲ್ಲಿ ಪರಿಹಾರ ಹುಡುಕಲು ಬಂದ ನಾಯಕಿ ಸಮಸ್ಯೆ ಬಗೆ ಹರಿಸುತ್ತಾಳೆಯೋ ಇಲ್ಲವೋ ಎಂಬ ಕತೆಯ ಎಳೆ ಇಟ್ಟು ಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಕೌಟುಂಬಿಕ ಭಾವನಾತ್ಮಕ ಹಾಗೂ ಸಾಹಸ ಮಯವಾಗಿದ್ದು, ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಬೆಳಕು ಚೆಲ್ಲುವ ಈ ಚಲನ ಚಿತ್ರವನ್ನು ಎಲ್ಲಾ ವಯೋ ಮಾನದವರು ಕುಳಿತು ನೋಡುವಂತಹ ಕತೆ ಮಾಡಲಾಗಿದೆ. ಇದರಲ್ಲಿನ ಮುಖ್ಯ ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಇದ್ದಾರೆ.

ಇದರ ಕತೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದು. ಸಹಾಯಕ ನಿರ್ದೇಶಕರಾಗಿ ಪವನ್ ಕುಲಕರ್ಣಿ. ಸತೀಶ ಕ್ಯಾತಘಟ್ಟ, ಕಣಿವೆಪ್ಪ.ಬಿ, ಕೆಲಸ ಮಾಡಿದ್ದಾರೆ. ಛಾಯಾಗ್ರಹಣವನ್ನು ಶರಣು ಸುಗ್ನಳ್ಳಿ, ಲಕ್ಷ್ಮಣ, ಮೈಲಾರಿ ಗಗನ, ಸ್ಥಿರ ಚಿತ್ರಣ ವಿನ್ಸೆಂಟ್ ಪರೇರಾ, ಸಂಕಲನ ಶರಣು ಸುಗ್ನಳ್ಳಿ, ಅಮೀತ ಬಳ್ಳಾರಿ, ಸಂಗೀತ ಮಹಾರಾಜ್, ಹಿನ್ನೆಲೆ ಸಂಗೀತ ರಾಜ್ ಭಾಸ್ಕರ್, ಸಾಹಸ ಕರಾಟೆ ಮಂಜು, ಶಂಕರ ಶಾಸ್ತ್ರೀ, ನೃತ್ಯ ವಿನಾಯಕ, ಕಲಾ ನಿರ್ದೇಶನ ಶಾಂತಯ್ಯ ಪರಡಿಮಠ, ವಸ್ತ್ರಾಲಂಕಾರ ಹಾಗೂ ಪ್ರಸಾಧನವನ್ನು ಬಿ.ಎಚ್.ನಯನಾ ನಿರ್ವಹಿಸಿದ್ದಾರೆ. ಮುಖ್ಯ ಪಾತ್ರವರ್ಗದಲ್ಲಿ ನಾರಾಯಣ ಪೂಜಾರ, ಶ್ರೀನಿವಾಸ್ ಹುಲ್ಕೋಟಿ, ಕ್ಷಿತಿ ವೀರಣ್ಣ, ಮನೀಷಾ ಕಬ್ಬೂರ, ಬೇಬಿ ಕೃಷ್ಣವೇಣಿ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಹನುಮಂತ, ಮಾಲತೇಶ ಸುಂಕದ, ಅಬ್ದುಲ್ ಮುನ್ನಾ ಎರೇಸೀಮೆ, ಬಸವರಾಜ ಹೊಂಬಾಳಿ, ಭುವನಾ, ವಿದ್ಯಾ ಬೆಳಗಾಂವ, ಹೀತೇಶ, ವಿಜಯಕುಮಾರ ನಾಗರತ್ನ ಮೊದಲಾದ ಕಲಾವಿದರು ನಟಿಸಿದ್ದಾರೆ. ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ ಅವರ ಪತ್ರಿಕಾ ಸಂಪರ್ಕ ಇದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ನಟರಾದ ಮನೀಷಾ ಕಬ್ಬೂರು, ವಿನೋದ್ ಭಾಂಡೆಗೆ, ವಾಣಿ, ವಸಂತ ಕಡತಿ ಹಾಗೂ ಹಾಗೂ ಡಾ, ಪ್ರಭು ಗಂಜಿಹಾಳ ಪಾಲ್ಗೊಂಡಿದ್ದರು.

*****

– ಡಾ, ಪ್ರಭು ಗಂಜಿಹಾಳ

ಮೊ – 9448775346

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button