ಸಾವಿರಾರು ಕ್ವಿಂಟಾಲ್ ಭತ್ತ ಖರೀದಿ ಮಾಡಿ ರೈತರಿಗೆ ಪಂಗನಾಮ ಹಾಕಿದ – ರೈಸ್ ಮಿಲ್ ಮುಂದೆ ಜಮಾಯಿಸಿ ರೈತರ ಪ್ರತಿಭಟನೆ.
ಮಾನ್ವಿ ಜೂ.10

ರೈತರೆಂದರೆ ಅಮಾಯಕರು ಇರುತ್ತಾರೆಂದು ತಿಳಿದು ಮಾನ್ವಿ ಪಟ್ಟಣದ ಶಿವರಾಮ್ ಹಾಗೂ ವೆಂಕಟಸಾಯಿ ರೈಸ್ ಮಿಲ್ ಮಾಲಕರು 40 ಕೋಟಿಗೂ ಹೆಚ್ಚು ಹಣ ಪಂಗನಾಮ ಹಾಕಿದ್ದಾರೆಂದು ಆರೋಪಿಸಿ ನೂರಾರು ರೈತರು ವೆಂಕಟಸಾಯಿ ರೈಸ್ ಮಿಲ್ ಮುಂದೆ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಅಂದರೆ ಸಾಕು ಹೆಚ್ಚಾಗಿ ರೈತರು ಭತ್ತ ಬೆಳೆಯುತ್ತಾರೆ.ಆದರೆ ಭತ್ತ ಬೆಳೆದ ರೈತರು ಶಿವರಾಮ್ ಮತ್ತು ವೆಂಕಟಸಾಯಿ ರೈಸ್ ಮಾಲಕರಿಗೆ ನೀಡಿದ್ದಾರೆ.ಆದರೆ ಅಮಾಯಕ ರೈತರಿಗೆ ಪಂಗನಾಮ ಹಾಕಿ ಪರಾರಿ ಆಗಿದ್ದಾರೆ.
ನಮಗೆ ಅನ್ಯಾಯವಾಗಿದೆ ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ. ಮಾನ್ವಿ ಪೊಲೀಸ್ ಇಲಾಖೆ ಯವರು ಸಹ ನಮಗೆ ಮೋಸ ವ್ಯಕ್ತಿಗಳನ್ನು ಹಿಡಿದು ತರುವ ಕೆಲಸ ಮಾಡಬೇಕು. ನಾವು ವಿಷ ಕುಡಿದು ಸತ್ತರೆ ಇದಕ್ಕೆ ಮೋಸ ಮಾಡಿದವರೇ ನೇರ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ