ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು – ಪೂಜ್ಯ ವೈ.ರಾಜಾರಾಮ್ ಸದ್ಗುರುಗಳು ಅಭಿಪ್ರಾಯ.
ಚಳ್ಳಕೆರೆ ಸ.12

ಆದರ್ಶಮಯ ವ್ಯಕ್ತಿತ್ವವನ್ನು ಶ್ರೀರಾಮಚಂದ್ರನಲ್ಲಿ ಕಾಣುತ್ತೇವೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಪೀಠದ ಅಧ್ಯಕ್ಷರಾದ ಪೂಜ್ಯ ವೈ.ರಾಜಾರಾಮ್ ಗುರುಗಳು ತಿಳಿಸಿದರು.

ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ ಗೋವಿಂದರಾಜು ಅವರ ಅನ್ನಪೂರ್ಣ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ರಾಮಾಯಣ” ದ ಬಗ್ಗೆ ಆಶೀರ್ವಚನ ನೀಡಿದರು.

ಹದಿನಾರು ಗುಣ ವಿಶೇಷತೆಗಳನ್ನು ಒಳಗೊಂಡ ಭಗವಾನ್ ಶ್ರೀರಾಮಚಂದ್ರನ ಮಹಾನ್ ಚರಿತ್ರೆಯನ್ನು ಒಳಗೊಂಡಿರುವ ವಾಲ್ಮೀಕಿ ಮಹರ್ಷಿಗಳು ರಚಿಸಿರುವ ಶ್ರೀಮದ್ ರಾಮಾಯಣ ಕೃತಿಯಲ್ಲಿ ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯಕಾಂಡ, ಕಿಷ್ಕಿಂಧಾ ಕಾಂಡ,ಸುಂದರ ಕಾಂಡ, ಯುದ್ಧ ಕಾಂಡ ಸೇರಿದಂತೆ ಉತ್ತರ ಕಾಂಡಗಳನ್ನು ಒಳಗೊಂಡ ಭಾರತೀಯ ಸನಾತನ ಪರಂಪರೆಯ ಮೇರು ಗ್ರಂಥ ರಾಮಾಯಣ ಎಂದು ಹೇಳಿದರು.

ಪೂಜ್ಯ ವೈ.ನರಹರಿ ಗುರುಗಳು ಮಾತನಾಡಿ ಪುರಾಣದ ಕಥೆಯಂತೆ ನಮ್ಮ ದೇಹದ ಒಳಗೆಯೇ ನಿತ್ಯ ದೇವತೆಗಳು ಅಸುರರ ನಡುವೆ ಯುದ್ಧ ನಡೆಯುತ್ತಿರುತ್ತದೆ.

ಈ ಯುದ್ಧಕ್ಕೆ ಆತ್ಮ ವಸ್ತುವೇ ಸಾಕ್ಷಿ ಸ್ವರೂಪವಾಗಿದ್ದು ಇದರ ಬಲದಿಂದ ಅಸುರರನ್ನು ಸುಲಭವಾಗಿ ಸೋಲಿಸಿ ಅಮೃತತ್ವವನ್ನು ಪಡೆಯಬಹುದು ಎಂದು ತಿಳಿಸುತ್ತ ಉಪನಿಷತ್ತಿನ ಅನೇಕ ದೃಷ್ಟಾಂತ ಕಥೆಗಳನ್ನು ಹೇಳಿದರು.

ಸತ್ಸಂಗದ ಕೊನೆಯಲ್ಲಿ ಸಿಂಹಾದ್ರಿ ಸದ್ಗುರು ದಂಪತಿಗಳ ಭಾವಚಿತ್ರಕ್ಕೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ ಗೋವಿಂದರಾಜು, ರಾಘವೇಂದ್ರ,ಮಮತ, ಲಕ್ಷ್ಮೀ ವಂಶಿಕೃಷ್ಣ, ಅಶೋಕ, ಅಕ್ಷರ, ನಂದನ್, ವಿಶಾಲಾಕ್ಷಿ, ನಾಗಭೂಷಣ, ನಾಗಲಕ್ಷ್ಮೀ ಪುರುಷೋತ್ತಮ, ಟೈಲರ್ ಸರಸ್ವತಿ, ಸರಸ್ವತಿ ಮಾಕಂ ಶ್ರೀನಿವಾಸಲು,ಸರಸ್ವತಿ ಪಾಂಡುರಂಗಶೆಟ್ಟಿ, ಯತೀಶ್ ಎಂ ಸಿದ್ದಾಪುರ, ಜ್ಯೋತಿ ಸತೀಶ್, ಸಂತೋಷ್, ಕಲ್ಪನಾ, ಲತಾ, ಲಕ್ಷ್ಮೀ ವೆಂಕಟಾಚಲಂ, ಸುಶೀಲಮ್ಮ ಅಯ್ಯಪ್ಪ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.