ಎಸ್.ಎಸ್ ಮಹಾ ವಿದ್ಯಾಲಯದಲ್ಲಿ, 4. ದಿನದ ಅದ್ದೂರಿ ಗ್ರಾಮೀಣ ಸೊಗಡು ಹಾಗೂ – ಸಂಪ್ರದಾಯಿಕ ವಾರ ಕಾರ್ಯಕ್ರಮ.

ರೋಣ ಜೂ.13

ನಗರದ ಪ್ರಸಿದ್ದ ಮಹಾ ವಿದ್ಯಾಲಯವಾದ ಕೆ.ಎಸ್.ಎಸ್ ಮಹಾ ವಿದ್ಯಾಲಯದಲ್ಲಿ ದಿನಾಂಕ 09/06/2025 ರಿಂದ 12/06/2025 ರ ವರೆಗೆ ವಿದ್ಯಾರ್ಥಿಗಳಿಗಾಗಿ ನೂತನ ಕಾರ್ಯಕ್ರಮ ಜರುಗಿತು. ಅದುವೇ ಗ್ರಾಮೀಣ ಸೊಗಡು ಹಾಗೂ ಸಾಂಪ್ರದಾಯಿಕ ವಾರ ಕಾರ್ಯಕ್ರಮ ವಿದ್ಯಾರ್ಥಿಗಳಿಗಾಗಿಯೇ ನೂತನ ಗ್ರಾಮೀಣ ಸೊಗಡು ಹಾಗೂ ಸಾಂಪ್ರದಾಯಿಕ ವಾರ ಎಂಬ ಹಳ್ಳಿ ಹಬ್ಬವನ್ನು ಕಾಲೇಜಿನ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಥಮ ದಿನ ಅಂದರೆ 09/06/2025 ರಂದು ವಿದ್ಯಾರ್ಥಿಗಳಿಂದ ವಿನೂತನ ಕಾರ್ಯಕ್ರಮಗಳು ಜರುಗಿದವು ಭಕ್ತಿ ಗೀತೆ ಜನಪದ ಗೀತೆ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳು ನಡೆದವು ವಿದ್ಯಾರ್ಥಿಗಳ ಬಗೆ ಬಗೆಯ ಹಾಡುಗಳನ್ನು, ಆಕರ್ಷಕರ ರಂಗೋಲಿ ಮೆಹೆಂದಿ ಎಲ್ಲಾ ಸ್ಪರ್ಧಿಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅದೇ ರೀತಿಯಾಗಿ ಎರಡನೇ ದಿನ 10/06/2025 ರಂದು ಭಾವಗೀತೆ, ರ್ಯಾಂಪವಾಕ, ಕಿರು ನಾಟಕ ಮುಂತಾದ ಸ್ಪರ್ಧೆಗಳು ನಡೆದವು ವಿದ್ಯಾರ್ಥಿಗಳು ವಿನೂತನವಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಉಪನ್ಯಾಸಕರು ಇದರಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಅದೇ ರೀತಿಯಾಗಿ ದಿನಾಂಕ 11,12 ರಂದು ಸಾಂಪ್ರದಾಯಿಕ ಸೊಗಡನ್ನು ಬಿಂಬಿಸುವ ಬಟ್ಟೆಗಳನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಧರಿಸಿದ್ದರು. ಈ ದಿನ ಚಲನ ಚಿತ್ರಗೀತೆ, ಭಾವಗೀತೆ, ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹಾ ವಿದ್ಯಾಲಯವು ಹಬ್ಬದ ವಾತಾವರಣ ದಿಂದ ಸಂಭ್ರಮಿಸಿತ್ತು ಗ್ರಾಮೀಣ ಸೊಗಡಿನ ಅನಾವರಣವನ್ನು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು ವಿಶೇಷ ಉಪಹಾರ ವ್ಯವಸ್ಥೆ ಯೊಂದಿಗೆ ಗಂಡು ಮಕ್ಕಳು ಭಾರತೀಯ ಸಂಪ್ರದಾಯದಂತೆ ಧೋತಿ ಪೈಜಾಮ್ ನೆಹರು ಶರ್ಟ್ ಲುಂಗಿ ರುಮಾಲು ಮುಂತಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಇದರೊಂದಿಗೆ ಕಾಲೇಜಿನ ಎಲ್ಲ ಉಪನ್ಯಾಸಕ ವೃಂದ ಕೂಡ ವಿಶೇಷವಾಗಿ ಧೋತಿ ಫೈಜಾಮ್ ಲುಂಗಿ ಉಡುಪುಗಳನ್ನು ಧರಿಸಿದ್ದರು. ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು, ಎಲ್ಲಾ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button