“ಅಪ್ಪನೆಂದರೆ ಅದ್ಭುತ ಶಕ್ತಿ ಬಾಳ್ವೇಗೆ ಸ್ಪೂರ್ತಿ”…..

ತಂದೆಯೇ ಬಾಳ ಏಳ್ಗೇಗೆ ಬೆಳಕು ಕುಟುಂಬದ
ನಾವಿಕ ಮನೆತನಕೆ ಆದರ್ಶಮಯ ನಾಯಕ
ದೇಶದ ಅಭಿವೃದ್ಧಿಗೆ ಸಹಕಾರಿ
ಹೇಗಲ ಮೇಲೆ ಹೊತ್ತು ದೇವರ
ದರ್ಶನ ಮಾಡಿಸಿದಾತ
ತನ್ನಂತೆ ಮಕ್ಕಳಿಗೆ ಕಷ್ಟ ಬಾರದಿರಲಿ
ನಿತ್ಯ ದುಡಿವ ಪುಣ್ಯಾತ್ಮ
ಗದರಿಸುವ ಭಾವದಲಿ ಅಪಾರ ಪ್ರೀತಿ
ತುಂಬುವ ದಾರಿದೀಪ
ಬಾಳ್ವೇಗೆ ನಿಜ ಮಾರ್ಗದರ್ಶಕ
ಹರಕಲು ಬಟ್ಟೆ ಧರಸಿದರೂ
ಮಕ್ಕಳ ಉತ್ತಮೊತ್ತಮವ ಬಯಕೆ
ಈಡೇರಿಸುವ ಸಾಕ್ಷಾತ್ ನಿಶ್ವಾರ್ಥ
ಕಾಯಕಯೋಗಿ
ತನಗಿಂತ ಅಧಿಕ ಸಾಧನೆ ಮಕ್ಕಳಲಿ
ಕಾಣುವ ನಿತ್ಯ ಕರ್ಮಯೋಗಿ
ಸೋತರು ಪುನಃ ಪುನಃ ಹರುಷದಿ
ಹಾರೈಸುವ ಸ್ನೇಹಜೀವಿ
ಮಕ್ಕಳ ಬಾಳಿನಲಿ ಸದಾ ಬೆಳಕ
ಮೂಡಿಸುವ ಮೂಢಣ ರವಿ ಕಿರಣ
ನೀ ಆಗುವದಾದರೆ ನಿಮ್ಮ ತಂದೆ ತಾಯಿ
ಅಭಿಮಾನಿಗಳಾಗಿ ಜಗದಲಿ ಮಾದರಿಯಾಗಿ
ಸ್ವಾಭಿಮಾನಿಯಾಗಿ
“ಅಪ್ಪನೆಂದರೆ ಅದ್ಭುತ ಶಕ್ತಿ ಬಾಳ್ವೇಗೆ ಸ್ಪೂರ್ತಿ “
ನಾಯಕರ ನಿಜ ನಾಯಕನಿಗೆ
ಶತಕೋಟಿ ನಮನಗಳು
ಶ್ರೀ ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ