ತಾಲೂಕು ಸೆಂಟ್ರಿಂಗ್ ಕಾರ್ಮಿಕರ ಸಂಘ ಉದ್ಘಾಟನೆ.
ತರೀಕೆರೆ ಅಕ್ಟೋಬರ್.28

ಕಟ್ಟಡ ನಿರ್ಮಾಣಕ್ಕೆ ಸಹಕಾರಿಯದ ಸೆಂಟ್ರಿಂಗ್ ಕಾರ್ಮಿಕರು ಸಂಘಟಿತರಾಗಿ ತಡವಾಗಿ ಸಂಘವನ್ನು ನೋಂದಣಿ ಮಾಡಿಸಿದ್ದೀರಿ, ಸಂಘದಿಂದ ಕಾರ್ಮಿಕರ ಕಷ್ಟಗಳಿಗೆ ಹಾಗೂ ಆರೋಗ್ಯ ಅನಾರೋಗ್ಯ ಮತ್ತು ಸಾವು ನೋವುಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಶಾಸಕರಾದ ಜಿ.ಎಚ್. ಶ್ರೀನಿವಾಸ್ ರವರು ಹೇಳಿದರು. ಅವರು ಪಟ್ಟಣದ ಗಾಂಧಿ ಪಾರ್ಕ್ ಬಳಿ ತಾಲೂಕು ಸೆಂಟ್ರಿಂಗ್ ಕಾರ್ಮಿಕರ ಸಂಘವು ಏರ್ಪಡಿಸಿದ್ದ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿರಿ,ಸಂಘದಿಂದ ಪ್ರತಿಭಾವಂತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿರಿ, ಸಂಘದಿಂದ ಒಗ್ಗಟ್ಟು ಸಂಘಟನೆಯನ್ನು ಪ್ರತಿಬಿಂಬಿಸುತ್ತದೆ, ನಿಮ್ಮ ಜೊತೆಯಲ್ಲಿ ನಾನು ಇದ್ದೇನೆ. ನಿಮಗೆ ಸಹಕಾರ ಮಾಡುತ್ತೇನೆ. ಸಂಘದಿಂದ ಒಳ್ಳೆಯ ಕೆಲಸಗಳನ್ನು ಮಾಡಿರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಪರಮೇಶ್, ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಫಾರೂಕ್, ಸಮಾಜ ಸೇವಕ ಎಂ ನರೇಂದ್ರ ಮಾತನಾಡಿದರು. ಹಾಗೂ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ಸದಸ್ಯರಾದ ಅಂಜಯ್ ಅನಿಲ್ ಕುಮಾರ್, ಟಿ ಎಸ್ ಚೇತನ್, ಹಾಗೂ ವಕೀಲರಾದ ಶಿವಶಂಕರ್ ನಾಯಕ್, ಆರ್ಯ ಈಡಿಗ ಸಮಾಜದ ಮುಖಂಡರಾದ ರಾಘವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ವಹಿಸಿದ್ದು, ಉಷಾ ಪ್ರಾರ್ಥಿಸಿ,ಗಿರೀಶ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ