ಹಿರೇರೂಗಿ ಶಾಲಾ ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಜಿಎಸ್,
ಯುಬಿಎಸ್ ಶಾಲೆಗಳಿಗೆ ಹಿರೇರೂಗಿ ಪಿಡಿಓ ಬಸವರಾಜ ಬಬಲಾದ, ಗ್ರಾಮ ಲೆಕ್ಕಾಧಿಕಾರಿ ಶ್ರೀಶೈಲ ಹಂಚಿನಾಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಅವರು ಮತಗಟ್ಟೆ ಕೋಣೆಗಳಲ್ಲಿ ಬಾಗಿಲು,ಕಿಟಕಿ, ವಿದ್ಯುತ್ ಸಂಪರ್ಕದ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ,ಇಳಿಜಾರು ವ್ಯವಸ್ಥೆಯಂತಹ ಅನೇಕ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಸಣ್ಣಪುಟ್ಟ ದುರಸ್ತಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಹಾಗೆಯೇ ಶಿಕ್ಷಕರಿಂದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.
ಮಕ್ಕಳೊಂದಿಗೆ ಬಿಸಿಊಟದ ರುಚಿಯ ಕುರಿತು ಸಮಾಲೋಚಿಸಿದರು.ಹಾಗೆಯೇ ಮಧ್ಯಾನ್ಹದ ಬಿಸಿಯೂಟವನ್ನು ಮಕ್ಕಳೊಂದಿಗೆ ಸವಿದರು.ಈ ಸಂದರ್ಭದಲ್ಲಿ ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಶಿಕ್ಷಕರಾದ ಸಂತೋಷ ಬಂಡೆ, ಎಸ್ ಎಂ ಪಂಚಮುಖಿ,ಎಸ್ ಬಿ ಕುಲಕರ್ಣಿ,ಎಸ್ ಡಿ ಬಿರಾದಾರ, ವಿ ವೈ ಪತ್ತಾರ ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ಶ್ರೀಧರ ಬಾಳಿ,ಶರಣು ನಾಟೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.