ಎಸ್.ಎಸ್.ಎಲ್.ಸಿ ಫಲಿತಾಂಶ – ಇಂಡಿ ತಾಲೂಕ ಪ್ರಥಮ.
ಇಂಡಿ ಜೂ.15

ಎಸ್.ಎಸ್.ಎಲ್.ಸಿ ಎರಡನೆಯ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟ ಗೊಂಡಿದ್ದು ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಎ.ಓ ಹೂಗಾರ ತಿಳಿಸಿದ್ದಾರೆ. ಇಂಡಿ ತಾಲೂಕಿನಿಂದ ೧೨೫೬ ಬಾಲಕರು, ೭೮೦ ಬಾಲಕಿಯರು ಒಟ್ಟು ೨೦೩೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೫೭೧ ಬಾಲಕರು ೩೮೫ ಬಾಲಕಿಯರು ಒಟ್ಟು ೯೫೬ ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಶೇ ೪೬ ರಷ್ಟು ಬಾಲಕರು, ಶೇ ೫೦ ರಷ್ಟು ಬಾಲಕಿಯರು ಒಟ್ಟು ಶೇ ೪೬.೯೫ ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಮತ್ತು ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರ ಎ.ಓ ಹೂಗಾರ ತಿಳಿಸಿದ್ದಾರೆ.