ವಿಶ್ವ ಅಪ್ಪಂದಿರ ದಿನ ಆಚರಿಸಿದ – ಅವಳಿ ಸಹೋದರಿಯರು.
ವಿಜಯಪುರ ಜೂ.15

ವಿಶ್ವದ ಎಲ್ಲಾ ಅಪ್ಪಂದಿರಿಗೆ ಅಭಿನಂದಿಸುತ್ತಾ ಜೂನ್ 15 ರಂದು ವಿಶ್ವ ಅಪ್ಪಂದಿರ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಈ ನಿಮಿತ್ತವಾಗಿ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಸಹೋದರಿಯರಾದ ಅನುಶ್ರೀ – ಶ್ರೀನಿಧಿ ಬಂಡೆ ಅವರು ತಮ್ಮ ತಂದೆ ಸಂತೋಷ ಬಂಡೆ ಅವರಿಗೆ ಸಿಹಿ ತಿನ್ನಿಸಿ, ವಿಶ್ವ ಅಪ್ಪಂದಿರ ದಿನವನ್ನು ಆಚರಿಸಿದರು.ಪುರಾಣ ಕಾಲದಿಂದಲೂ ತಂದೆ ಮಕ್ಕಳ ಸಂಬಂಧ ಶ್ರೇಷ್ಠ ಎನಿಸಿ ಕೊಂಡಿದೆ. ತನ್ನ ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯ. ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ, ಅಪ್ಪ ಅಂದರೆ ಪ್ರೀತಿ, ಅಪ್ಪ ದೇವರು ಕೊಟ್ಟ ವರ. ತಂದೆ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸ ಸದಾ ಇರುತ್ತದೆ. ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸಿದವ. ಜೀವನದ ದಾರಿ ತೋರಿಸಿದವ. ಬಾಲ್ಯದಲ್ಲಿ ಕೈ ಹಿಡಿದು ಹೆಜ್ಜೆ ಹಾಕಲು ಹೇಳಿ ಕೊಟ್ಟವ. ಧೈರ್ಯವಾಗಿ ಎಲ್ಲರ ಎದುರು ನಿಲ್ಲಲು ದಾರಿ ತೋರಿದವ. ಕಿರು ಬೆರಳು ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು.