ಶಿರಗುಪ್ಪಿ ಯಿಂದ ಆರ್.ಎಮ್.ಎಸ್.ಎ ಪ್ರೌಢ ಶಾಲೆಗೆ – ಬಸ್ಸ್ ಪ್ರಾರಂಭ.
ಜಮಖಂಡಿ ಜೂ.16

ಶಾಲಾ ಮಕ್ಕಳಿಗೆ ಅನುಕೂಲತೆಯ ದೃಷ್ಟಿಯಿಂದ ಇವತ್ತಿನ ದಿನ ಶಿರಗುಪ್ಪಿ ಗ್ರಾಮದ ಹಿರಿಯರು, ಗ್ರಾಮದ ಮುಖಂಡರು, ಹಾಗೂ ಯುವಕರು, ಶಿರಗುಪ್ಪಿ ಯಿಂದ ಹಿಪ್ಪರಗಿ ಹೋಗಲು ಶಾಲಾ ವಿದ್ಯಾರ್ಥಿಗಳಿಗೆ RMSA (ಪ್ರೌಢ ವಿಭಾಗ) ಶಾಲೆಗೆ ಹೋಗಲು ಊರಿನಿಂದ ಸುಮಾರು 3 ಕಿಲೋ ಮೀಟರ್ ದೂರ ಇದ್ದ ಕಾರಣ ಮಕ್ಕಳಿಗೆ ಅಸ್ತವ್ಯಸ್ತ ಆಗುತ್ತಿತ್ತು. ರಸ್ತೆ ಮಧ್ಯೆ ವಿದ್ಯಾರ್ಥಿನಿಯರಿಗೆ ಭಯದ ವಾತಾವರಣ ಇತ್ತು. ಮಳೆಗಾಲದ ಸಮಸ್ಯೆ ಮನಗಂಡ ಗ್ರಾಮಸ್ಥರು ತಮ್ಮ ಒಗ್ಗಟ್ಟಿನಲ್ಲಿ ಆ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ಕಲ್ಪಿಸುವಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಡಿಪೋ ವ್ಯವಸ್ಥಾಪಕರು, ಸರ್ವ ಗುರು ಹಿರಿಯರು, ಮುಖಂಡರು, ಯುವಕರಿಗೆ, ವಿದ್ಯಾರ್ಥಿಗಳಿಂದ ಶುಭ ಹಾರೈಕೆಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಿಠ್ಠಲ. ಎಮ್.ತಳವಾರ.ಶಿರಗುಪ್ಪಿ.ಜಮಖಂಡಿ