ಎಸ್.ವ್ಹಿ.ವ್ಹಿ.ಎಸ್ ಕಾಲೇಜಿನ ಆವರಣದಲ್ಲಿ – ಯೋಗ ಶಿಬಿರ ಆಯೋಜನೆ.
ಢವಳಗಿ ಜೂ.20

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ಢವಳಗಿ ಗ್ರಾಮದ ಎಸ್.ವ್ಹಿ.ವ್ಹಿ.ಎಸ್ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ 8 ರವರೆಗೆ ಯೋಗ ಶಿಬಿರವನ್ನು ವಿಜಯವಾಣಿ ಮಾಧ್ಯಮ ಸಹಯೋಗ ದೊಂದಿಗೆ ಹಮ್ಮಿ ಕೊಳ್ಳಲಾಗಿದೆ. ಯೋಗ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸುವರು ಎಂದು ಕಾಲೇಜಿನ ಪ್ರಾಚಾರ್ಯರಾದ ಎನ್.ಎ ಬಿರಾಜದಾರ ಅವರು ತಿಳಿಸಿದರು ಎಂದು ವರದಿಯಾಗಿದೆ.