ಪಿ.ಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ – ಅಂತರಾಷ್ಟ್ರೀಯ ಯೋಗ ದಿನ ಆಚರಣೆ.

ನೀರಮಾನ್ವಿ ಜೂ.22

ಅಂತರಾಷ್ಟ್ರೀಯ ಯೋಗ ದಿನಾಚರಣೆ ಶಾಲೆಯ ಮಕ್ಕಳು ಶಿಕ್ಷಕರು ಶಿಕ್ಷಣ ಪ್ರೇಮಿಗಳ ಜೊತೆ ವಿಂಜೃಂಬಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಸನಾತನ ಧರ್ಮದ ಯೋಗವನ್ನು ಮಾಡಿದರೆ ರೋಗದಿಂದ ಮುಕ್ತಿ ಇದೆ ಶಾಲೆಯ ಮುಖ್ಯ ಗುರುಗಳಾದ ಸತೀಶ್ ಕುಮಾರ್ ಮಾತನಾಡಿ ಯೋಗವೆಂದರೆ ಚೈತನ್ಯ ಸಂಕೇತ ಯೋಗವು ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮಾರ್ಗ ನಾವೆಲ್ಲರೂ ಯೋಗವನ್ನು ದಿನ ನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡು ಆರೋಗ್ಯವಂತ ಶಾಂತಿಯುತ ಮತ್ತು ಸಮತೋಲನ ಜೀವನದಿ ಹೆಜ್ಜೆ ಹಾಕೋಣ ಬೆಳಿಗ್ಗೆ ಯಾಗಲಿ ಸಂಜೆ ಯಾಗಲಿ ಪ್ರತಿದಿನ ಯೋಗ ಮಾಡಿ ಯಾವುದೇ ತರಹದ ರೋಗವು ನಮ್ಮ ಹತ್ತಿರ ಸುಳಿಯುವುದಿಲ್ಲ.

ಅದಕ್ಕಾಗಿ ಪ್ರತಿ ದಿನ ಮಕ್ಕಳು ಬೆಳಿಗ್ಗೆ ದಿನ ನಿತ್ಯದ ಕೆಲಸಗಳನ್ನು ಮುಗಿಸಿ 30 ನಿಮಿಷಗಳ ಕಾಲ ಯೋಗ ಮಾಡಿದರೆ ನಾವು ಆರೋಗ್ಯದಿಂದ ಇರಬಹುದು ಅದಕ್ಕಾಗಿ ತಾವೆಲ್ಲರೂ ನಮ್ಮ ಸನಾತನ ಧರ್ಮದ ಈ ಮೂಲ ಮಂತ್ರವನ್ನು ಮರೆಯಬಾರದು ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಮಾತನಾಡಿ ಯೋಗವೊಂದು ಔಷಧ ಇದ್ದಹಾಗೆ ಈ ಔಷಧ ಬೆಳಗಿನ ಸಮಯದಲ್ಲಿ ಮೊದಲಿಗೆ ಸೂರ್ಯ ನಮಸ್ಕಾರ ಪ್ರಾರಂಭ ಮಾಡಿ ನಂತರ ಕಪಾಲ್ ಬಾತಿ ಶರೀರಕ್ಕೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ನಮ್ಮ ಶರೀರಕ್ಕೆ ನಾವು ಸ್ವಲ್ಪ ಕಷ್ಟಕೊಟ್ಟು ಯೋಗ ಮಾಡಿದರೆ ನಾವು ನಮ್ಮ ಶರೀರವನ್ನು ಸುರಕ್ಷಿತವಾಗಿ ಇಡಬಹುದು ನೋಡಿ ನಮ್ಮ ರೈತರು ಜಮೀನುಗಳಲ್ಲಿ ಕೆಲಸ ಮಾಡಿ ಎಷ್ಟು ಆರೋಗ್ಯದಿಂದ ಇರುತ್ತಾರೆ ಹಾಗೆ ನಮ್ಮ ಯೋಧರು ಎಷ್ಟು ಕಷ್ಟ ಪಟ್ಟು ಶರೀರವನ್ನು ದಂಡಿಸುತ್ತಾರೆ ಅವರು ಕೂಡ ಒಳ್ಳೆಯ ಸದೃಢವಾಗಿರುತ್ತಾರೆ ಅದಕ್ಕಾಗಿ ನಾವು ಯೋಗವನ್ನು ನಮ್ಮ ದಿನಚರಿಯಲ್ಲಿ ಸೇರಿಸಿ ಕೊಳ್ಳ ಬೇಕಾಗಿದೆ ಶಾರೀರಿಕ ಶಿಕ್ಷಕಿ ಕುಮಾರಿ ಶಿವಮ್ಮ ರವರು ಯೋಗಾಸನದ ಬಗ್ಗೆ ಕಿರು ಪರಿಚಯ ಹಾಗೂ ಯಾವ ರೀತಿ ಮಾಡಿದರೆ ದೇಹಕ್ಕೆ ವ್ಯಾಯಾಮ ಸಿಗುತ್ತದೆ ಎಂದು ಶಾಲಾ ಮಕ್ಕಳಿಗೆ ಬಂದಂತ ಎಲ್ಲಾ ಯೋಗಾ ಪಟುಗಳಿಗೆ ತಿಳಿಸಿದರು. ಹಾಗೆ ಗ್ರಾಮದ ಹಳೆಯ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರು ಅತಿಥಿ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಗ್ರಂಥಪಾಲಕ ರಂಗನಾಥಗೌಡ ಹಾಜರಿದ್ದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button