ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಿಂದ ಸಮರ್ಥ ರಾಷ್ಟ್ರ ನಿರ್ಮಾಣ – ಚೇತನ್ ಕುಮಾರ್ ಅಭಿಪ್ರಾಯ.
ಚಳ್ಳಕೆರೆ ಜೂ.09





ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಿಂದ ಸಮರ್ಥ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಪಾಲ್ಗೊಂಡು ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದ ಬಗ್ಗೆ ವಿಶೇಷ ಉಪನ್ಯಾಸ ಮಾಲಿಕೆಯನ್ನು ನಡೆಸಿ ಕೊಟ್ಟರು.

ಈ ಶಿಬಿರದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು. ಈ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಶಾಂತಿ ಮಂತ್ರ,ಸ್ವದೇಶ ಮಂತ್ರ ಹಾಗೂ ಅಮ್ಮ ಶಾರದೆ ನುಡಿಮುತ್ತುಗಳ ಪಠಣ ಹಾಗೂ “ವಿನೋದದಿಂದ ವಿವೇಕ” ದಡಿಯಲ್ಲಿ ವಿವಿಧ ಆಟಗಳನ್ನು ಆಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಸಂತೋಷಕುಮಾರ, ಋತಿಕ್, ನಮ್ರತಾ, ಹರ್ಷಿತಾ, ಪ್ರತೀಕ್ಷಾ, ಯುಕ್ತ, ಯಶಸ್ಸು, ದವನ್, ನಾಗೇಶ್, ಮನೀಷ್, ಚಂದನ್, ಶಾಶ್ವತ್, ಅದಿಸ್, ಯಶಸ್ವಿ, ಲಕ್ಷ್ಮೀ, ಸಮರ್ಥ್, ಪ್ರಣಾಮ್ಯ, ಕೋಮಲಸಿರಿ, ವೈಷ್ಣವಿ,ವಿನತಿ, ಶ್ರೇಯಸ್ಸು,ಮನಸಿರಿ, ವಿಷ್ಣು, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.