ಖಾಸ್ಗತ್ತೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀಗಳ ಸಾನಿಧ್ಯದಲ್ಲಿ ಭೀಮನ ಬಾವಿಯ – ಸ್ವಚ್ಛತೆ ಕಾರ್ಯಕ್ಕೆ ಸಜ್ಜು.
ತಾಳಿಕೋಟೆ ಜು.01

ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವಕ್ಕೆ ಸಜ್ಜು ಶ್ರೀಗಳ ಸಾನಿಧ್ಯದಲ್ಲಿ ಭೀಮನ ಬಾವಿಯ ಸ್ವಚ್ಛತೆಗೆ ಸ್ಪರ್ಶ. ಸಾಮೂಹಿಕ ಶ್ರಮದಾನದಲ್ಲಿ ಕೈಜೋಡಿಸಿದ ಗಣ್ಯರು ಭಕ್ತರು ಮತ್ತು ಮಠದ ಪ್ರಧಾನತೆ ಪಡೆದ ಪಿ.ಎಸ್.ಐ ಗೆ ಸನ್ಮಾನ ತಾಳಿಕೋಟಿ ಪಟ್ಟಣದ ಐತಿಹಾಸಿಕ ಶ್ರೀ ಖಾಸಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಗಂಗಸ್ಥಳ ಪೂಜೆ ಕಾರ್ಯಕ್ಕೆ ಪೂರ್ಣ ಬಾವಿಯಾಗಿ ಪವಿತ್ರ ಭೀಮನ ಬಾವಿಗೆ ಸ್ವಚ್ಛತೆ ಕಾರ್ಯಕ್ರಮವು ಇಂದು ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜೆ ಸಿದ್ದಲಿಂಗ ದೇವರ ದಿವ್ಯ ಸಾನಿಧ್ಯದಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು. ಜಾತ್ರೆಯ ಪ್ರಮುಖ ಧಾರ್ಮಿಕ ವಿಧಿ ವಿಧಾನಗಳಲ್ಲಿ ಒಂದಾದ ರಂಗಸ್ಥಳ ಪೂಜೆಗಾಗಿ ಭೀಮನ ಬಾವಿಯನ್ನು ಸ್ವಚ್ಛತೆ ಗೊಳಿಸುವ ಪುಣ್ಯ ಕಾರ್ಯದಲ್ಲಿ ಹಸಿರು ಸಂಪದ ಬಳಗ. ಪೊಲೀಸ್ ಇಲಾಖೆ ಸಾಮೂಹಿಕ ಕಾರ್ಯಕರ್ತರು ಹಾಗೂ ಶ್ರೀಮಠದ ನೂರಾರು ಭಕ್ತರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಸಮಾಧಾನ ಮಾಡಿದರು. ಭೀಮನ ಬಾವಿಯ ಆವರಣ ಮೆಟ್ಟಿಲುಗಳು ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸಿದರು ಮುಂಬರುವ ಜಾತ್ರಾ ಮಹೋತ್ಸವಕ್ಕೆ ಭಕ್ತಿ ಪೂರಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರಮ ಪೂಜ್ಯ ಸಿದ್ದಲಿಂಗ ದೇವರು ಕಾಯಕವೇ ಕೈಲಾಸ ನಮ್ಮ ತೀರ್ಥಕ್ಷೇತ್ರ ಭಾವೈಕ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಭಕ್ತರ ಆದ್ಯ ಕರ್ತ್ಯಯು ಜಾತ್ರೆಯ ಕೇವಲ ಸಂಭ್ರಮವಲ್ಲ ಅದು ಸಾಮೂಹಿಕ ಶ್ರದ್ಧೆ ಮತ್ತು ಸೇವೆಯ ಪ್ರತೀಕ ಎಂದು ಎಲ್ಲರೂ ಸೇರಿ ಮಾಡಿದ ಸ್ವಚ್ಛತೆ ಕಾರ್ಯ ದೇವರ ಸಮಾನ ಎಂದು ನುಡಿದರು. ಶ್ರಮದಾನದಲ್ಲಿ ಪಾಲ್ಗೊಂಡು ಎಲ್ಲರನ್ನು ಆಶೀರ್ವದಿಸಿದರು. ಪೊಲೀಸ್ ಅಧಿಕಾರಿಗೆ ಶ್ರೀಮಠದ ಗೌರವ ಇದೆ ಸಂದರ್ಭದಲ್ಲಿ ತಾಳಿಕೋಟೆಯ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಸೇವೆ ಸಲ್ಲಿಸಿ ಇವತ್ತಿಗೆ ಸಿ.ಪಿ.ಐ ಉನ್ನತೆ ಪಡೆದ ಶ್ರೀ ರಾಮನಗೌಡ ಸಂಕನಾಳ್ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಪರಮ ಪೂಜ್ಯ ಸಿದ್ದಲಿಂಗ ದೇವರು ಶಾಲುಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿ ಅವರ ಮುಂದಿನ ಸೇವೆಗೆ ಶುಭ ಹಾರೈಸಿದರು. ಸಮಾಜ ಮುಖಿ ಕಾರ್ಯಕ್ರಮದಲ್ಲಿ ಅಧಿಕಾರಿ ಒಬ್ಬರನ್ನು ಗೌರವಿಸಿದ್ದು ವಿಶೇಷವಾಗಿತ್ತು. ಈ ಸ್ವಚ್ಛತೆ ಕಾರ್ಯಕ್ರಮದಲ್ಲಿ ಹಸಿರು ಸಂಪದ ಬಳಗದ ಅಧ್ಯಕ್ಷ ಡಾಕ್ಟರ್, ವಿ.ಎಸ್ ಕಾರಜಿ. ಡಾ, ವೀರೇಶ್ ಹುಕ್ಕೇರಿ. ಆರ್.ಎಸ್ ಬಂಗಿ. ಎಸ್.ಎಸ್ ಗಡೆದ್. ಜಯಸಿಂಗ್ ಮೂಲಿಮನಿ. ಡಾಕ್ಟರ್, ಅನಿಲ್ ಕುಮಾರ್ ಇರಾಜ್. ಸೇರಿದಂತೆ ಅನೇಕ ಗಣ್ಯರು ಹಸಿರು ಬಳಗದ ಸದಸ್ಯರು. ಪೊಲೀಸ್ ಸಿಬ್ಬಂದಿಗಳು ಹಾಗೂ ಶ್ರೀಮಠದ ಭಕ್ತರು ಭಾಗವಹಿಸಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಕೈಜೋಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ