ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳಗುಣಕಿ ಶಾಲೆಯ ನೂತನ – ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ.
ಹಳಗುಣಕಿ ಮಾ.25

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಇಲ್ಲಿಯ ಸರಕಾರಿ ಪ್ರೌಢ ಶಾಲೆಯ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವು ದಿನಾಂಕ 23 03 2025 ರವಿವಾರ ನಡೆಯಿತು. ಈ ಒಂದು ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಷಟಸ್ಥಲ ಬ್ರಹ್ಮ ಪರಮ ಪೂಜ್ಯ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮುಖಾರೂಢ ಮಠ ವಿಜಯಪುರ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಯಶವಂತರಾಯಗೌಡ.ವಿ ಪಾಟೀಲ್ ಸನ್ಮಾನ್ಯ ಜನಪ್ರಿಯ ಶಾಸಕರು ಇಂಡಿ ವಿಧಾನ ಸಭಾ ಕ್ಷೇತ್ರ ಇವರು ವಹಿಸಿದ್ದರು. ನೂತನ ಶಾಲಾ ಕಟ್ಟಡವು ಸುಮಾರು 12 ಕೋಣೆಗಳಿಂದ ಕೂಡಿದ್ದು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯವರ ಸಹ ಯೋಗದಲ್ಲಿ ನಿರ್ಮಾಣವಾಗಿದ್ದು, ಈ ಒಂದು ಕಟ್ಟಡವನ್ನು ಗುತ್ತಿಗೆದಾರರಾದ ಶ್ರೀ ನಾಗನಗೌಡ ಚೌದರಿ ಅವರು ಬಹಳ ಅಚ್ಚು ಕಟ್ಟಾಗಿ ಮಾಡಿಕೊಟ್ಟಿದ್ದಾರೆ. ಅಲ್ಲದೆ ಹಳಗುಣಕಿ ಗ್ರಾಮದ ಗುತ್ತಿಗೆದಾರರಾದ ಅಪ್ಪಾಶಗೌಡ ಬಿರಾದಾರರವರು ಮುತುವರ್ಜಿ ವಹಿಸಿ ಈ ಕಟ್ಟಡವನ್ನು ಕಟ್ಟಿಸಿದ್ದಾರೆ. ಮಾನ್ಯ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ್ ಅವರು ಸರಸ್ವತಿಯ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ನಂತರದಲ್ಲಿ ಶಿಲನ್ಯಾಸವನ್ನು ಅನಾವರಣ ಮಾಡಿ ಕಟ್ಟಡವನ್ನು ಬೋಧನಾ ಕಾರ್ಯಗಳಿಗೆ ಅರ್ಪಿಸಿದರು. ತದ ನಂತರದಲ್ಲಿ ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಜ್ಯೋತಿ ಬೆಳಗುವುದ ರೊಂದಿಗೆ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಹಾಗೂ ಶ್ರೀಗಳು ಉದ್ಘಾಟಿಸಿದರು. ಸಿದ್ದೇಶ್ವರ ಶ್ರೀಗಳ ಫೋಟೋ ಪೂಜೆಯನ್ನು ಮಾನ್ಯ ಶಾಸಕರು ಹಾಗೂ ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮುಖಾರೂಡ ಮಠ ವಿಜಯಪುರ ಅವರು ನೆರವೇರಿಸಿದರು ನಂತರದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀ ಎಸ್ ಎಸ್ ಕರ್ಜಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯು 1998 ರಲ್ಲಿ ಕೇವಲ 16 ವಿದ್ಯಾರ್ಥಿಗಳಿಂದ ಆರಂಭವಾಗಿ ಈಗ ಸುಮಾರು 700 ವಿದ್ಯಾರ್ಥಿಗಳು ಕಲಿಯುವಷ್ಟು ದೊಡ್ಡ ಸಂಸ್ಥೆಯಾಗಿ ಹೊರ ಹೊಮ್ಮಿದೆ ಇದಕ್ಕೆ ಶಿಕ್ಷಣ ಪ್ರೇಮಿಗಳ, ಸಕಲ ಗ್ರಾಮಸ್ಥರ ಹಾಗೂ ಸುತ್ತಲ ಹಳ್ಳಿಯ ಗ್ರಾಮಸ್ಥರ ಮತ್ತು ಶಾಲೆಯ ಎಸ್ ಡಿ ಎಂ ಸಿ ಅವರ ಶಿಕ್ಷಣ ಪ್ರೇಮಿಗಳ ಮತ್ತು ಶಾಲೆಯ ಶಿಕ್ಷಕರ ವರ್ಗದವರ ಶ್ರಮವೇ ಕಾರಣವೆಂದರು. ಇಂದು ಶಾಲೆ ಸಕಲ ಸೌಲಭ್ಯಗಳನ್ನು ಹೊಂದಿ ಇನ್ನೂಳಿದ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದು ಹೆಮ್ಮೆಯ ಸಂಗತಿ ಎಂದರು. ಇಂದು ಶಾಲೆಯಲ್ಲಿ ಡಿಜಿಟಲ್ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ. ಎನ್ ಎಸ್ ಕ್ಯೂ ಎಫ್ ಶಿಕ್ಷಣ ವ್ಯವಸ್ಥೆ ಹೀಗೆ ಹತ್ತು ಹಲವು ರೀತಿಯ ಶಿಕ್ಷಣ ಹಳ್ಳಿಯ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವುದು ಈ ಭಾಗದ ವಿದ್ಯಾರ್ಥಿಗಳ ಭಾಗ್ಯವೇ ಸರಿ ಎಂದರು ನಂತರದಲ್ಲಿ ಗ್ರಾಮಸ್ಥರಾದ ಶ್ರೀ ಸುಂಟ್ವಾಳ ಸರ್ ಅವರು ಅತಿಥಿಗಳಾಗಿ ಮಾತನಾಡುತ್ತ ಶಾಲೆ ಇಂದು ತ್ರಿವೇಣಿ ಸಂಗಮದಂತೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಒಳಗೊಂಡು ನಮ್ಮ ಹಳಗುಣಕಿ ಹಾಗೂ ಸುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹರಡುತ್ತಿದೆ. ವಿದ್ಯಾರ್ಥಿಗಳಿಗೆ ಈ ಸಂಸ್ಥೆ ವಿಶ್ವವಿದ್ಯಾನಿಲಯದಂತೆ ವಿದ್ಯಾ ಕಾಶಿಯಾಗಲಿ ಎಂದು ಆಶಿಸಿದರು. ನಂತರದಲ್ಲಿ ಮಾನ್ಯ ಶಾಸಕರು ಮಾತನಾಡುತ್ತಾ ಈ ಶಾಲೆ ಹಳಗುಣಕಿ ಗ್ರಾಮದ ಶಿಕ್ಷಣ ಪ್ರೇಮಿಗಳ ಕೊಡುಗೆಯಾಗಿದೆ. ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಪಡೆಯಲು ದೂರದ ಇಂಡಿ ಅಥವಾ ಹೋರ್ತಿ ಗ್ರಾಮಗಳಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ದಿನಗಳಲ್ಲಿ ಇಲ್ಲಿಯೇ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಆರಂಭಿಸಿ ಸುತ್ತಮುತ್ತದ ಹಳ್ಳಿಯ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಮುಂದುವರೆದು ಶಿಕ್ಷಕರು ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಹತ್ತಿರದಲ್ಲಿದ್ದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿದಾಗ ಮಾತ್ರ ಶಿಕ್ಷಕರ ಗೌರವ ಹೆಚ್ಚುತ್ತದೆ ಅಂತಹ ಶಿಕ್ಷಕರು ಈ ಶಾಲೆಯಲ್ಲಿರುವುದು ಈ ಶಾಲೆಯ ಮಕ್ಕಳ ಭಾಗ್ಯ ಎಂದು ಹೇಳುತ್ತಾ ಈ ಶಾಲೆ ಉತ್ತರೋತ್ತರವಾಗಿ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರಲ್ಲದೆ ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡುವಂತೆ ಉಪಪ್ರಾಂಶುಪಾಲರು ಹಾಗೂ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ರವರು ನೀಡಿದ ಮನವಿಯನ್ನು ಸ್ವೀಕರಿಸಿದರು. ಅವುಗಳನ್ನು ಕೂಡ ಮಂಜೂರು ಮಾಡುವ ಭರವಸೆಯನ್ನು ನೀಡಿದರು. ನಂತರದಲ್ಲಿ ಪರಮಪೂಜ್ಯ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮುಖಾರೂಢ ಮರ ವಿಜಯಪುರ ಇವರು ಆಶೀರ್ವಚನ ನೀಡುತ್ತಾ ಶಾಲೆಗಳು ದೇವಾಲಯ ಗಳಿದ್ದಂತೆ. ಇಲ್ಲಿರುವ ಮಕ್ಕಳೇ ದೇವರು.ಮಕ್ಕಳ ಮನಸ್ಸಿಗೆ ನೋವಾಗದಂತೆ ಅವರನ್ನು ತಿದ್ದಿ ತೀಡಿ ಈ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ರೂಪಿಸ ಬೇಕೆಂದರು ಇಂದು ಶಿಕ್ಷಣ ಪ್ರತಿಯೊಂದುಮಗುವಿನ ಹಕ್ಕು ಅದನ್ನು ಪ್ರತಿ ಮಗುವು ಕೂಡ ಪಡೆಯಲೇ ಬೇಕು. ಮಗುವಿಗೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿ ಎಂದು ತಮ್ಮ ಆಶೀರ್ವಚನ ನೀಡಿದರು.ವೇದಿಕೆಯ ಮೇಲೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನಂದೀಶ ರಾಠೋಡ. ಅಕ್ಷರ ದಾಸೋಹ ಯೋಜನೆಯ ತಾಲೂಕಾ ನಿರ್ದೇಶಕರಾದ ಶ್ರೀಮತಿ ಸುಜಾತಾ ಪೂಜಾರಿ, ಬಬಲಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಿದರಾಯಗೌಡ ಬಾ ಬಿರಾದಾರ ಉಪಾಧ್ಯಕ್ಷರಾದ ಶ್ರೀಮತಿ ಮಹಾನಂದಾ ನಿಂ ಮಾದರ ಹಾಗೂ ಸರ್ವಸದಸ್ಯರು, ಶಾಲೆಯ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಶ್ರೀ ಸಿದ್ದನಗೌಡ ಕೆ ಪಾಟೀಲ್ ಉಪಾಧ್ಯಕ್ಷರಾದ ಶ್ರೀ ಸದಾಶಿವ ಮಾದರ ಹಾಗೂ ಸರ್ವ ಸದಸ್ಯರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆದ ಎ ಎನ್ ಪಾಟೀಲ್ ಅವರು ಗುತ್ತಿಗೆದಾರರಾದ ಶ್ರೀ ನಾಗನಗೌಡ ಚೌದ್ರಿ ಹಾಗೂ ಅಪ್ಪಾಶಗೌಡ ಬಿರಾದಾರ.ಅಲ್ಲದೇ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಗುರನಗೌಡರು, ಹಳಗುಣಕಿ ಗ್ರಾಮದ ಪಿ ಕೆ ಪಿ ಎಸ್ ಸಂಸ್ಥೆಯ ಅಧ್ಯಕ್ಷರಾದ ಕಲ್ಲಪ್ಪ ಕುಂಬಾರ ಅವರು, ಶಿಕ್ಷಣ ಪ್ರೇಮಿಗಳಾದ ಶ್ರೀ ಅಣ್ಣಾಸಾಹೇಬಗೌಡ ಪಾಟೀಲ್. ಮಲಕಣ್ಣ ಬಬಲಾದ ಮಲ್ಲಿಕಾರ್ಜುನ ಬಿರಾದಾರ ಅವರು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಹೆಗಡ್ಯಾಳ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಎ ಎಂ ಇಂಡಿ ಅವರು ನಿರೂಪಿಸಿದರು. ಶ್ರೀ ಪಿ ಎಸ್ ತಳಕೇರಿ ಶಿಕ್ಷಕರು ಪ್ರಾರ್ಥಿಸಿದರು. ಶ್ರೀ ಡಿ ಸಿ ಹರಿಜನ ಶಿಕ್ಷಕರು ಸ್ವಾಗತಿಸಿದರು. ಶ್ರೀ ಎಸ್ ಎಸ್ ಬಂಡೆ ಶಿಕ್ಷಕರು ಸನ್ಮಾನ ಕಾರ್ಯಕ್ರಮ ನಡೆಸಿ ಕೊಟ್ಟರು. ಶ್ರೀ ಬಸವರಾಜ ಸರ್ ಅವರು ವಂದಿಸಿದರು. ಶಾಲೆಯ ಇತರ ಶಿಕ್ಷಕರಾದ ಶ್ರೀ ವಿ.ಬಿ ಬಿರಾದಾರ, ಸುಖದೇವ ಕಾಂಬಳೆ, ಶ್ರೀಮತಿ ಎನ್.ಎಂ ಪಾಟೀಲ್. ಶ್ರೀಮತಿ ಎಂ.ಸಿ ಜವಳಗಿ, ಶ್ರೀಮತಿ ಎಂ.ಎಚ್ ಪಾಟೀಲ್, ಶ್ರೀಮತಿ ಎ.ಎ ಜಹಾಗೀರದಾರ್. ಶ್ರೀಮತಿ ಎಸ್.ಯು ದೊಡಮನಿ. ಶ್ರೀಮತಿ ಜಿ ಡಿ ಕೋಳಿ.ಪ್ರಭಾಕರ ಸಿಂಘ.ಸಂಗಮೇಶ ಪಲ್ಲಕ್ಕಿ, ಉತ್ಸವ ಶ್ರೀಮತಿ ಸುಜಾತಾ ಸಾರವಾಡ ಶ್ರೀ ಅಪ್ಪಾ ಶ ಮಲ್ಲೇಶ ಇಂಡಿ ಹಾಗೂ ಪ್ರಾಥಮಿಕ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ