ನ್ಯೂ ಮಾ ಶಾಲೆಯಲ್ಲಿ ವನಸಿರಿ ಪೌಂಡೇಷನ್ ನಿಂದ – ವಿಶ್ವ ಪರಿಸರ ದಿನಾಚರಣೆ.
ಸಿಂಧನೂರು ಜು.02





ನಗರದ R.H ನಂ 4 ರ ನ್ಯೂ ಮಾ ಶಾರದಾ ಆಂಗ್ಲ ಮಧ್ಯಮ ಶಾಲೆಯಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ 50 ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ನ್ಯೂ ಮಾ ಶಾರದಾ ಶಾಲೆಯ ಸಂಸ್ಥಾಪಕರಾದ ನೀಲ್ ಕಮಲ್ ಸ್ವಾರಕರ್ ಮಾತನಾಡಿ ಪರಿಸರವು ಪ್ರತಿಯೊಂದು ಜೀವ ರಾಶಿಗಳಿಗೆ ಅತ್ಯವಶ್ಯ. ಮುಂದಿನ ಪೀಳಿಗೆಗೆ ಪರಿಸವನ್ನು ನಾವುಗಳೆಲ್ಲರೂ ಕಾಪಾಡುವುದು ಅತ್ಯವಶ್ಯಕವಾಗಿದೆ. ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸುತ್ತದೆಯೇ ಹೊರತು, ಆತನ ದುರಾಸೆಯನ್ನಲ್ಲ” ಎಂಬ ಗಾಂಧೀಜಿಯವರ ಮಾತಿನಲ್ಲಿ ಅರ್ಥಗರ್ಭಿತವಾಗಿದೆ. ಇದನ್ನು ನಾವುಗಳು ಮನಗಾಣಬೇಕು. ಇತ್ತೀಚಿನ ಆಧುನಿಕತೆಯಲ್ಲಿ ಮನುಷ್ಯ ನಾನು ನನ್ನದು ಎಂದು ಗಿಡ ಮರಗಳನ್ನು ಕಡಿದು ಹಾಕುತ್ತಿದ್ದಾನೆ. ಆದರೆ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ನಿಸ್ವಾರ್ಥ ಸೇವೆಯಿಂದ ದಿನ ನಿತ್ಯ ಗಿಡ ಮರಗಳ ರಕ್ಷಣೆಯಲ್ಲಿ ತೊಡಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯ.

ಅವರ ಈ ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇವರಿಂದ ಸಿಂಧನೂರು ಹಸಿರಾಗಿ ಕಂಗೊಳಿಸುತ್ತಿದೆ. ನಾವು ಕೂಡಾ ಅಮರೇಗೌಡ ಮಲ್ಲಾಪುರ ಜೊತೆಗೂಡಿ ಗಿಡ ಮರಗಳನ್ನು ಬೆಳಸಲು ಮಂದಾಗೋಣ ಎಂದರು.ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಗಿಡ ಮರಗಳಿದ್ದರೆ ನಾವುಗಳೆಲ್ಲರೂ ಜೀವಿಸಲು ಸಾಧ್ಯ,ಇವತ್ತಿನ ದಿನಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ವಸ್ತಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರದಲ್ಲಿ ದುರ್ವಾಸನೆ ಯಿಂದ ಪರಿಸರ ದಿನ ನಿತ್ಯ ಹಾಳಾಗುತ್ತಿದೆ. ಇದರಿಂದ ಜನರಿಗೆ ಹಲವಾರು ರೋಗ ರುಜಿನಗಳು ಹರಡುತ್ತವೆ. ಆದ್ದರಿಂದ ನಾವುಗಳೆಲ್ಲರೂ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಬೆರ್ಪಡಿಸಿ ನಗರ ಸಭೆಯ ವಾಹನ ಬಂದಾಗ ಹಾಕಬೇಕು. ನಮಗೆ ಶುದ್ಧವಾದ ಗಾಳಿ ಬೇಕಾದರೆ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳಸಲು ಮುಂದಾಗಬೇಕು ಎಂದರು.ಈ ಸಂಧರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಶಾಲೆಯ ಅಧ್ಯಕ್ಷ ಅಮರ ಶ್ರೀಲ್ ಸಂಸ್ಥಾಪಕ ನೀಲ್ ಕಮಲ್ ಸ್ವರಕಾರ್, ಮುಖ್ಯ ಗುರು ಇಂದಿರಾ,ಸದಸ್ಯ ಖಾನಾಯಿ ದೇವರಿ ಹಾಗೂ ವನಸಿರಿ ಸದಸ್ಯರಾದ ದೇವು ತಿಮ್ಮಾಪುರ,ವೀರಭದ್ರಯ್ಯ ಸ್ವಾಮಿ,ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.