ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆಗೆ – ಹೈಕೋರ್ಟ್ ತಡೆ.

ಜಕ್ಕಲಿ ಜು.02

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಸಭೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ಅವಿಶ್ವಾಸ ನಿರ್ಣಯ ಮಂಡಿಸಿದವರಿಗೆ ಭಾರಿ ಮುಖಭಂಗ ಉಂಟಾಗಿದೆ.ಜಕ್ಕಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ.ದ್ಯಾಮಪ್ಪ ಜಂಗಣ್ಣವರ ಬಿಜೆಪಿ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನವನ್ನು ಸ್ವೀಕಾರ ಮಾಡಿದ್ದರು. ಆದರೆ ಇವರ ವಿರುದ್ಧ ಸ್ವ ಪಕ್ಷದವರಾದ ಕಾಂಗ್ರೆಸ್ ಸದಸ್ಯರು ಈ ಮೊದಲು 6 ತಿಂಗಳ ಹಿಂದೆ ಅವಿಶ್ವಾಸ ಮಂಡನೆ ಮಾಡಿತ್ತು. ಅವಾಗ್ಲು ಕೂಡ ಬಿಜೆಪಿ ಅಭ್ಯರ್ಥಿಯಾದ ಗಂಗವ್ವ ಅಧ್ಯಕ್ಷ ಸ್ಥಾನನವನ್ನು ಪುನಃ ಅಲಂಕರಿಸಿ ಕೊಳ್ಳುವದರ ರೊಂದಿಗೆ ಕಾಂಗ್ರೆಸ್ ಸದಸ್ಯರಿಗೆ ಬಾರಿ ಮುಖಭಂಗ ಮಾಡಿದ್ದರು.ಮುಖಭಂಗ ಮಾಡಿಕೊಂಡ ಈ ಕಾಂಗ್ರೆಸ್ ಸದಸ್ಯರು ಅಷ್ಟಕ್ಕೇ ಸುಮ್ಮನಾಗದೇ 6 ತಿಂಗಳ ಬಳಿಕ ಪುನಃ ಎರಡನೇ ಬಾರಿ ಅವಿಶ್ವಾಸ ಮಂಡನೆಗೆ ಮನವಿ ಸಲ್ಲಿಸಿದರು. ಹೀಗಾಗಿ ಜೂಲೈ 2 ಬುಧವಾರ ಸಭೆ ನಿಗದಿ ಮಾಡಲಾಗಿತ್ತು. ಇದಕ್ಕೂ ಕುಗ್ಗದ ಅಧ್ಯಕ್ಷೆ ಗಂಗವ್ವ ಅವರು ಧಾರವಾಡದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು.

ಕಾಂಗ್ರೆಸ್ ಸದಸ್ಯರಿಗೆ 6 ತಿಂಗಳಲ್ಲಿ ಮುಖಬಂಗದ ಮೇಲೆ ಮುಖಭಂಗ ಮಾಡುವದರೊಂದಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ನಿರಾಸೆ ಮೂಡಿಸಿದೆ.ಜಕ್ಕಲಿ ಗ್ರಾಮ ಪಂಚಾಯಿತಿ 13 ಸದಸ್ಯ ಬಲದ ಪಂಚಾಯಿತಿಯಲ್ಲಿ. ಕಾಂಗ್ರೆಸ್ 9. ಬಿಜೆಪಿ ನಾಲ್ವರು ಸದಸ್ಯರಿದ್ದಾರೆ. ಆದರೀಗ 9 ಜನ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಆದರೆ ಅಧ್ಯಕ್ಷೆ ಗಂಗವ್ವ ಸಭೆಗೆ ತಡೆಯಾಜ್ಞೆ ತಂದಿರುವುದು ಕಾಂಗ್ರೆಸ್ ಸದಸ್ಯರ ಮನವಿಗೆ ಕೋರ್ಟ್ ತಣ್ಣೀರು ಎರಚಿದೆ.ಈ ಆದೇಶದಿಂದ ಜುಲೈ 2 ರ ಮಧ್ಯಾಹ್ನ 12 ಗಂಟೆಗೆ ನಿಗದಿ ಪಡಿಸಲಾಗಿದ್ದ ನಿರ್ಣಯದ ಮೇಲಿನ ಚರ್ಚೆಯನ್ನು ಮಾನ್ಯ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ ಎಂದು ಗದಗ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಅಧ್ಯಕ್ಷೆ ಗಂಗವ್ವ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು, ಜುಲೈ 1/2025 ರಂದು ಮಧ್ಯಂತರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಏಕ ಸದಸ್ಯ ಪೀಠವು ಪ್ರಕರಣದ ಮುಂದಿನ ವಿಚಾರಣೆ ನಡೆಯುವ ವರೆಗೆ ಜೂನ್ 6/2025 ರಂದು ಉಪ ವಿಭಾಗಾಧಿಕಾರಿಗಳು ಹೊರಡಿಸಿದ್ದ ನೋಟಿಸ್‌ನ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ವಿಧಿಸಿ ಆದೇಶ ನೀಡಿದೆ.ಈ ತಡೆ ಯಾಜ್ಞೆಯಿಂದಾಗಿ ಅಧ್ಯಕ್ಷರನ್ನು ಅಧಿಕಾರದಿಂದ ಎರಡನೇ ಬಾರಿ ಕೆಳಗಿಳಿಸಲು ಯತ್ನಿಸುತ್ತಿದ್ದ ಗ್ರಾಮ ಪಂಚಾಯತಿ ಕಾಂಗ್ರೆಸ್ ಸದಸ್ಯರ ಪ್ರಯತ್ನಕ್ಕೆ ಹಿನ್ನಡೆ ಯಾಗಿದ್ದು, ಇದು ಅವಿಶ್ವಾಸ ಮಂಡನೆ ಮಾಡಿರುವ ಕಾಂಗ್ರೆಸ್ ಸದಸ್ಯರಿಗೆ ತೀವ್ರ ಅಂದರೆ ತೀವ್ರ ಮುಖಭಂಗ ಉಂಟಾಗಿದೆ.ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಜಕ್ಕಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹೊರಡಿಸಿರುವ ಆದೇಶದಲ್ಲಿ, ಹೈಕೋರ್ಟ್‌ನ ತಾತ್ಕಾಲಿಕ ತಡೆಯಾಜ್ಞೆ ಆದೇಶದ ಪ್ರತಿಯನ್ನು ಕೂಡಲೇ ಪಂಚಾಯತನ ಸೂಚನಾ ಫಲಕಕ್ಕೆ ಲಗತ್ತಿಸಿ, ಇಂದು ಸಂಜೆಯೊಳಗೆ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಒಟ್ಟಾರೆ ಜಕ್ಕಲಿ ಪಂಚಾಯತ್‌ನ ಆಡಳಿತದಲ್ಲಿ ಪ್ರಮುಖ ಬೆಳವಣಿಗೆ ಕಂಡು ಬಂದಿದ್ದು, ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ಅವಿಶ್ವಾಸ ನಿರ್ಣಯದ ಭವಿಷ್ಯ ಅನಿಶ್ಚಿತ ವಾಗಿದೆ. ಹೈಕೋರ್ಟ್‌ ಮುಂದಿನ ಆದೇಶದ ವರೆಗೂ ಅಧ್ಯಕ್ಷೆ ಗಂಗವ್ವ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಆದೇಶಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಗಂಗವ್ವ ಈ ಸಂಭ್ರಮ ನ್ಯಾಯಕ್ಕೆ ಸಿಕ್ಕ ಜಯ ಎಂದರು. ಬಳಿಕ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಇದೇ ಸಂದರ್ಭದಲ್ಲಿ.ರೋಣ ಮಂಡಲ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ.ಬಿಜೆಪಿ ಹಿರಿಯ ಮುಖಂಡ ಶಿವಪ್ಪ ಕೆಳಗೇಡಿ.ಶೇಕಣ್ಣ ಮಾರಣಬಸರಿ. ಬಸವರಾಜ್ ರಂಗಣ್ಣವರ.ಶರಣಪ್ಪ ಕೋರಿ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ. ಅಂದಪ್ಪ ಮಾದರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button