ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಣೆ ಮಾಡಿ ಹಾಗೆ ಮರ ಗಿಡಗಳನ್ನು ನಾಶ ಮಾಡದೇ ಪರಿಸರ ಕಾಪಾಡಿ – ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ.
ಕೂಡ್ಲಿಗಿ ಜು.02

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೊಲೀಸ್ ಠಾಣೆ ವತಿಯಿಂದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಮೊಹರಂ ಪ್ರಯುಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು, ಹಿಂದೂ-ಮುಸ್ಲಿಂ ಭಾವೈಕ್ಯತೆ ಹಾಗೂ ಸೌಹಾರ್ದತೆಯಿಂದ ಹೆಸರಾಗಿರುವ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು.ನಮ್ಮ ನಮ್ಮಲ್ಲಿ ಕೋಮು-ಗಲಭೆಗಳನ್ನು ಸೃಷ್ಟಿಸಿ ಕೊಂಡು ಹಬ್ಬ ಆಚರಿಸುವುದರಿಂದ ಧಾರ್ಮಿಕ ನಂಬಿಕೆಗಳು ಊರಿನಲ್ಲಿ ದೂರವಾಗುತ್ತವೆ. ಹೀಗಾಗಿ ಎಲ್ಲರೂ ಸಹೋದರರಂತೆ ಒಗ್ಗಟ್ಟಾಗಿ ಮೊಹರಂ ಹಬ್ಬವನ್ನು ಆಚರಿಸ ಬೇಕು ಯಾರು ಕೂಡಾ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಹಾಗೆ ಈ ಸಂದರ್ಭದಲ್ಲಿ ಪಟ್ಟಣದ ಅನೇಕ ಮುಖಂಡರುಗಳು ತಮ್ಮ ತಮ್ಮ ಸಲಹೆ ನೀಡುವುದ ರೊಂದಿಗೆ 20 ವಾರ್ಡುಗಳಲ್ಲಿ ಪಟ್ಟಣದ ಒಂದೇ ಸ್ಥಳದಲ್ಲಿ ಮೊಹರಂ ಹಬ್ಬವನ್ನು ಆಚರಣೆ ಮಾಡುವಂತದ್ದು ಇರುವುದು ಪಟ್ಟಣದಲ್ಲಿ ಮಾತ್ರ ಮಾಡುವಂತಹ ಧಾರ್ಮಿಕ ಆಚರಣೆಗಳನ್ನು ಪ್ರತಿ ವಾರ್ಡಿನ ಯುವಕರುಗಳು ಮಹಿಳೆಯರು ಹಿರಿಯರು ಭಾಗವಹಿಸುವುದ ರೊಂದಿಗೆ ಶಾಂತಿಯುತವಾಗಿ ಮೊಹರಂ ಹಬ್ಬದ ಆಚರಣೆಯನ್ನು ಮಾಡುವಂತೆ ಸಲಹೆ ಸೂಚನೆಗಳನ್ನು ಅನೇಕ ಮುಖಂಡರುಗಳು ಈ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿದ್ದ ತಹಶೀಲ್ದಾರ್ ವಿ.ಕೆ ನೇತ್ರಾವತಿ, ಸಿಪಿಐ ಪ್ರಹ್ಲಾದ್ ಆರ್.ಚನ್ನಗಿರಿ ಪಿಎಸ್ಐ, ಪ್ರಕಾಶ್.ಸಿ, ಪ.ಪಂ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಎಸ್, ದುರಗೇಶ್, ಪ.ಪಂ ಸದಸ್ಯರಾದ ತಳಾಸ್ ವೆಂಕಟೇಶ್, ಸಚಿನ್ ಕುಮಾರ್, ಈಶಪ್ಪ, ಕೆ. ಪ್ರಭಾಕರ್,ಬಾಸು ನಾಯ್ಕ್, ಬಿ. ರಾಘವೇಂದ್ರ, ಡಾಣಿ ರಾಘವೇಂದ್ರ,ಬೊಮ್ಮಘಟ್ಟ ಪಂಪಾ ಪತಿ, ಅಬ್ದುಲ್ ಕರೀಂ, ನಯೂಬ್, ಮ್ಯಾಕಿ ಚಂದ್ರಪ್ಪ,ಮಹೇಂದ್ರ ಕುಮಾರ್, ಅಬ್ದುಲ್ ರೈಮಾನ್, ಭರತ್ ಕುಮಾರ್, ಗುರಿಕಾರ ರಾಘವೇಂದ್ರ,ಕುಪ್ಪಿನಕೇರಿ ಬಸಣ್ಣ, ಪಟ್ಟಣದ ವಿವಿಧ ಸಮುದಾಯದ ಮುಖಂಡರು,ಪೊಲೀಸ್ ಸಿಬ್ಬಂದಿ ಗಳಾದ ಅಂಪಣ್ಣ, ಮಂಜುನಾಥ್, ಕೊಟ್ರೇಶ್, ತಿಪ್ಪೇಸ್ವಾಮಿ, ಇನ್ನಿತರರು ಸೇರಿದಂತೆ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ