ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು – ಯತೀಶ್.ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ ಆ.11

ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆಯನ್ನು ನಡೆಸಿಕೊಟ್ಟ ಅವರು ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದ ಕುರಿತಾಗಿ ಉಪನ್ಯಾಸ ನೀಡಿದರು.

ಶಾರೀರಿಕ ಶಕ್ತಿಯಲ್ಲಿ ಪೌಷ್ಟಿಕ ಆಹಾರ, ವ್ಯಾಯಾಮ, ಶುಚಿತ್ವ ಹಾಗೂ ನಿಶ್ಚಿಂತತೆಯ ಪಾತ್ರ ಹಿರಿದಾಗಿದ್ದು ಅವುಗಳ ಅನುಸರಣಿ ಯಿಂದ ನಮ್ಮ ಶರೀರ ಉತ್ತಮವಾಗಿ ಬೆಳವಣಿಗೆ ಹೊಂದುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಸಂನ್ಯಾಸಿಗೀತೆಯ ಗಾಯನ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ವಹಿಸಿದ್ದರೆ. ಸುಧಾಮಣಿ, ಮಂಜುಳ ಉಮೇಶ್, ಸಂತೋಷ್, ಚೇತನ್, ತಪಸ್ವಿನಿ, ಅಭಿಷೇಕ ಚಕ್ರವರ್ತಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.