ವಾಯು ಮಾಲಿನ್ಯ ತಡೆಗಟ್ಟಲು ಗಿಡ ಮರಗಳನ್ನು ಬೆಳಸಿ – ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ.ಮಾದಯ್ಯ ಎಂ.
ಸಿಂಧನೂರು ಜು.04

ನಗರದ ಪಿ.ಡಬ್ಲ್ಯೂ.ಡಿ ಕ್ಯಾಂಪ್ ನಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ.ಮಾದಯ್ಯ ಎಂ ಅವರು ಭೇಟಿ ನೀಡಿ ವಾಯು ಮಾಲಿನ್ಯ ತಡೆಗಟ್ಟಲು ಗಿಡ ಮರಗಳನ್ನು ಬೆಳಸಲು ಮುಂದಾಗಬೇಕು ಮತ್ತು ವನಸಿರಿ ಪೌಂಡೇಷನ್ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿ ಬುಡಸಮೇತ ಕಿತ್ತು ಹಾಕಿದ 30 ವರ್ಷಗಳ ಹಳೆಯದಾದ ಆಲದ ಮರವನ್ನು ತಂದು ನೆಟ್ಟು ಅದನ್ನು ಜೋಪಾನವಾಗಿ ಪೋಷಣೆ ಮಾಡಿ ಸಿಂಧನೂರು ಜನತೆಗೆ ಶುದ್ಧವಾದ ಗಾಳಿ ನೀಡುವಲ್ಲಿ ಅವಿರತವಾಗಿ ಪರಿಶ್ರಮ ವಹಿಸಿ ಯಶಸ್ವಿ ಯಾಗಿರುವ ವನಸಿರಿ ಪೌಂಡೇಷನ್ ಕಾರ್ಯ ಶ್ಲಾಘನೀಯ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಕೇವಲ ವನಸಿರಿ ತಂಡದ ಸದಸ್ಯರು ಮಾಡುವುದಲ್ಲದೆ ಇದರಲ್ಲಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ತೊಡಗಿದಾಗ ಸಿಂಧನೂರು ಇನ್ನೂ 30 ವರ್ಷಗಳ ಕಾಲ ಶುದ್ಧ ಗಾಳಿ ಪಡೆಯಬಹುದು. ಈಗಾಗಲೇ ಪ್ರತಿ ವರ್ಷ ಹೆಚ್ಚಾಗುತ್ತಿರುವ ವಾಹನಗಳು, ಅತೀ ಹಳೆಯ ವಾಹನಗಳಿಂದ ಅತೀ ಹೆಚ್ಚು ಹೊಗೆ ಬಂದು ವಾಯು ಮಾಲಿನ್ಯ ಉಂಟಾಗುತ್ತಿದೆ.

ಇದರಿಂದ ಸಾರ್ವಜನಿಕರಿಗೂ ಉಸಿರಾಡಲು ತೊಂದರೆ ಆಗುತ್ತದೆ. ಜೊತೆಗೆ ಹಳೆಯ ವಾಹನಗಳಿಂದ ಅಪಘಾತಗಳು ಹೆಚ್ಚಾಗುತ್ತಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿ ವರ್ಷ ವಾಹನ ತಪಾಸಣೆ ಗೋಳಪಡಿಸ ಬೇಕು. ಮತ್ತು ಹೆಲ್ಮೆಟ್ ಬಳಸುವುದನ್ನು ಪ್ರತಿಯೊಬ್ಬರೂ ಮರೆಯ ಬಾರದು. ಮತ್ತು ವಾಹನಗಳಿಗೆ ವಿಮಾ ಪಾಲಸಿ ಮಾಡಿಸಿ ಕೊಂಡು ಸುರಕ್ಷಿತ ಜೀವನ ಸಾಗಿಸಬೇಕು. ಆದುದರಿಂದ ವಾಯು ಮಾಲಿನ್ಯ ತಡೆಗಟ್ಟ ಬೇಕಾದರೆ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳಸಲು ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಡಿ.ವಾಯ್.ಎಸ್.ಪಿ ತಳವಾರ, ಸಿ.ಪಿ.ಐ ವೀರರೆಡ್ಡಿ, ಸಿ.ಪಿ.ಐ ದುರಗಪ್ಪ ಚಂದ್ರಶೇಖರ ಹಿರೇಮಠ್ ಟ್ರಾಫಿಕ್ ಪೊಲೀಸ್ ರು ಪಾಲ್ಗೊಂಡಿದ್ದರು.