“ಸಮಯಕ್ಕಾದವನೇ ಮಹಾದೇವ”…..

ತಂದೆ ತಾಯಿರ ಕೃಪಾ ಜೀವನ ಪರ್ಯಂತ
ಅಣ್ಣ ತಮ್ಮರ ಮಮಕಾರ ಸಹಕಾರ ಸತಿ ಸುತ
ಬರುವತನಕ
ತಂಗಿಯರ ದರಬಾರ ತವರು
ಮನೆಯಲ್ಲಿರುವತನಕ
ದೊಡ್ಡಪ್ಪ ಚಿಕ್ಕಪ್ಪರ ಸ್ನೇಹ ಸಮಾನತೆ ಆಸ್ತಿ
ಪಾಲು ಆಗುವತನಕ
ದೊಡ್ಡಮ್ಮ ಚಿಕ್ಕಮ್ಮರ ಶುಭ ಹಾರೖಕೆ ಮನೆ
ವಿಂಗಡನೆಯತನಕ
ಸಹೋದ್ಯೋಗಿಗಳ ಸೌಹಾರ್ದತೆ ನೀಚತನ
ತಿಳಿಯುವತನಕ
ಮಿತ್ರರ ಭಾತೃತ್ವ ನಯವಂಚನೆ
ತಿಳಿಯುವತನಕ
ಅಪರಿಚಿತರು ಸಂಶಯ ನಿವಾರಣೆಯತನಕ
ಪರಿಚಿತರು ಏಳ್ಗೆ ಉತ್ತಮತನ ಸಹಿಸುವತನಕ
ಒಳಿತು ಕೆಡಕು ವಿಚಾರ ಮಾಡದಿರುವನೇ
ಮೌನಯೋಗಿ
ಯಾರಾದರೇನು ಸಮಯಕ್ಕಾದವನೇ
ಮಹಾದೇವ.
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ