ಜಿ.ಯಶೋಧಾ ಪ್ರಕಾಶ್ ಅವರ ನಿವಾಸದಲ್ಲಿ “ಶ್ರೀಶಾರದಾದೇವೀ ಜೀವನ ಗಂಗಾ” – ಗ್ರಂಥ ಪಾರಾಯಣ ಕಾರ್ಯಕ್ರಮ.
ಚಳ್ಳಕೆರೆ ಜು.04

ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅವರ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಶ್ರೀಶಾರದಾದೇವೀ ಜೀವನ ಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಮಾಡುತ್ತ ಮಾತನಾಡಿದ ಜಿ.ಯಶೋಧಾ ಪ್ರಕಾಶ್ ಅವರು ಶಾರದಾ ಮಾತೆಯವರ ಜೀವನದ ಅನೇಕ ಘಟನೆಗಳನ್ನು ಮೆಲುಕು ಹಾಕಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ, ಶ್ರೀಕೃಷ್ಣನ ವಿಶೇಷ ಭಜನೆ ಹಾಗೂ ಶ್ರೀಮತಿ ಭ್ರಮರಂಭಾ ಮಂಜುನಾಥ ಅವರು ಬಸವಣ್ಣನವರ ಕುರಿತ ಭಜನೆಗಳನ್ನು ಹಾಡಿದರು. ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ವೀರಮ್ಮ, ಕವಿತಾ ಗುರುಮೂರ್ತಿ, ವಿಜಯಲಕ್ಷ್ಮಿ ರಾಮರೆಡ್ಡಿ, ಯತೀಶ್.ಎಂ ಸಿದ್ದಾಪುರ, ದ್ರಾಕ್ಷಾಯಣಿ ವಿಜಯೇಂದ್ರ, ಶಾರದಾಮ್ಮ, ಪಿ.ಎಸ್ ,ಮಾಣಿಕ್ಯ ಸತ್ಯನಾರಾಯಣ, ಸಂಗೀತ ವಸಂತಕುಮಾರ್, ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ರಶ್ಮಿ ವಸಂತ, ನಾಗರತ್ನಮ್ಮ ಇದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.