ವಯೋ ನಿವೃತ್ತಿ ಹೊಂದಿದ ಎಲ್.ಉಮಾಪತಿ ನಾಯ್ಕ್ ರವರಿಗೆ – ವಯೋ ನಿವೃತ್ತಿ ಜೀವನ ಸಂತೋಷದಾಯಕ ವಾಗಿರಲಿ ಎಂದ ಗಾನ ಕೋಗಿಲೆ ಉಮೇಶ್ ನಾಯ್ಕ್.
ಚಿನ್ನ ಸಮುದ್ರ ಜು.05

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗ ಹೊಸಪೇಟೆಯಲ್ಲಿ ಸಹಾಯಕ ಸಂಚಾರಿ ನಿರೀಕ್ಷಕರು ವಿಭಾಗಿಯ ತನಿಖಾ ದಳದಲ್ಲಿ ಕಾರ್ಯ ನಿರ್ವಹಿಸಿ ಸುಮಾರು 34 ವರ್ಷಗಳ ಸುದೀರ್ಘ ಸೇವೆಯನ್ನು ರಸ್ತೆ ಸಾರಿಗೆ ನಿಗಮದಲ್ಲಿ ಸಲ್ಲಿಸಿ ವಯೋ ನಿವೃತ್ತಿಯಾದ ಚಿನ್ನ ಸಮುದ್ರ ಗ್ರಾಮದ ಶ್ರೀ ಬೇವಿನ ಮರದಮ್ಮ ದೇವಸ್ಥಾನದ ಪೂಜಾರಿಗಳಾದ ಎಲ್ ಉಮಾಪತಿ ನಾಯ್ಕ ರವರಿಗೆ ಚಿನ್ನ ಸಮುದ್ರ ಗ್ರಾಮಸ್ಥರಿಂದ ಬಿಳ್ಕೊಡುಗೆ ಸಮಾರಂಭದ ಶುಭಾಶಯಗಳು ಸಲ್ಲಿಸಿ ಗೌರವ ಸನ್ಮಾನವನ್ನು ಮಾಡಿ ಶ್ರೀಯುತರ ವಯೋ ನಿವೃತ್ತಿ ಜೀವನ ಸಂತೋಷದಾಯಕ ವಾಗಿರಲಿ ಎಂದು ಶುಭ ಹಾರೈಸಿದರು.

ಗ್ರಾಮದ ಉಮೇಶ್ ನಾಯ್ಕ್ ಚಿನ್ನ ಸಮುದ್ರ ಸಿ.ಆರ್ ಅರುಣ ಕುಮಾರ್ ಕಾಶೀನಾಥ್. ಚಂದ್ರನಾಯಕ್. ಚಿದಾನಂದ ನಾಯಕ್. ಶ್ರೀನಿವಾಸ. ಶಂಕರ್ ನಾಯ್ಕ್. ಮುರಳಿ ಪಾಂಡು ನಾಯ್ಕ್. ಹಾಗೂ ಗ್ರಾಮಸ್ಥರು ಸೇರಿದ್ದರು ಎಂದು ವರದಿಯಾಗಿದೆ.