ಸಮಯ ಪ್ರಜ್ಞೆ ಇಲ್ಲದ ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ – ಸಾರ್ವಜನಿಕರಿಂದ ಆಕ್ರೋಶ.
ರೋಣ ಜು.05

ಪಟ್ಟಣದ ಡಾಕ್ಟರ್, ಭೀಮ ಸೇನ್ ಜೋಶಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಬಾರದ ವೈದ್ಯ ಸಿಬ್ಬಂದಿ ರೋಗಿಗಳು ದಿನ ನಿತ್ಯ ಪರದಾಡುವ ಸ್ಥಿತಿ ಎದುರಾಗಿದೆ ಪಟ್ಟಣದಲ್ಲಿ ಕಳೆದ 8-9 ತಿಂಗಳಿಂದ ಇದೆ ಪರಸ್ಥಿತಿ ನಿರ್ಮಾಣವಾಗಿದೆ ಈ ತಾಲೂಕ ಆಸ್ಪತ್ರೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಸಾಕ್ಷಿಯಾಗಿದೆ.
ಈ ಆಸ್ಪತ್ರೆಗೆ ಪ್ರತಿ ದಿನ ತಾಲೂಕಿನ ಸುತ್ತು ಮುತ್ತಲಿನ ಸುಮಾರು 10 ರಿಂದ 15 ಹಳ್ಳಿಯ ಬಡ ಜನರು ಚಿಕಿತ್ಸೆಗಾಗಿ ಬರುತ್ತಾರೆ ಆದರೆ ಇಲ್ಲಿ ಆಗಮಿಸುವ ರೋಗಿಗಳು ಮೂಲ ಸೌಲಭ್ಯದ ಕೊರತೆ ಎದುರಿಸುವಂತಾಗಿದೆ.
ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯ ಅಧಿಕಾರಿ ಶಕೀಲ್ ಅಹ್ಮದ್ ಎಲುಬು ಕಿಲು ತಜ್ಞ ವೈದ್ಯಾನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ಈ ವೈದ್ಯ ಪ್ರತಿ ದಿನ ಬೆಳಿಗ್ಗೆ 11 ಗಂಟೆ ಸಮಯವಾದರೂ ಕೂಡ ಆಸ್ಪತ್ರೆಗೆ ಬಾರದ ಶಕೀಲ್ ಅಹ್ಮದ್ ರೋಗಿಗಳು ಪರದಾಡುವಂತ ಪರಸ್ಥಿತಿಯನ್ನು ನಿರ್ಮಾಣ ಮಾಡಿದ್ದಾನೆ.

ಅಷ್ಟೇ ಅಲ್ಲ ಬೆಳಿಗ್ಗೆ 12 ಗಂಟೆ ಸಮಯವಾದರೂ ಎಲಬು ಕಿಲು ತಜ್ಞರಿಗಾಗಿ ಅನೇಕ ರೋಗಿಗಳು ಕ್ಯೂ ನಲ್ಲಿ ನಿಂತು ಕಾಯುತ್ತಿದ್ದರು.
ಈ ವೈದ್ಯನನ್ನು ಮಾದ್ಯಮದವರು ಮತ್ತು ಸಾರ್ವಜನಿಕರು ಸರಿಯಾದ ಸಮಯಕ್ಕೆ ಬಾರದೆ ಇರುವುದನ್ನು ಪ್ರಶ್ನೆ ಮಾಡಿದರೆ ಅದನ್ನು ಕೇಳಲು ನೀವ್ಯಾರು? ನನಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸವಿತ್ತು ಎಂದು ಉಡಾಫೆ ಉತ್ತರ ಕೊಡುವುದರೊಂದಿಗೆ ಮಾತಿಗೆ ಮಾತು ಉತ್ತರ ಕೊಡಲು ಮುಂದಾಗುತ್ತಾರೆ ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯ ಅಧಿಕಾರಿ ಶಕೀಲ್ ಅಹ್ಮದ್.
ಇವರೇನು ಸರ್ಕಾರದ ಸಮಯದ ಪ್ರಕಾರ ಸೇವೆ ಸಲ್ಲಿಸಲು ಬಂದಿದ್ದಾರಾ ಇಲ್ಲಾ ತಮಗೆ ಇಷ್ಟ ಬಂದಂತೆ ಹೋಗಲು ಬರಲು ಬೀಗರ ಮನೆ ಅಂದು ಕೊಂಡಿದ್ದಾರಾ ಎಂಬ ಯಕ್ಷ ಪ್ರಶ್ನೆಯಾಗಿದೆ.
ಈ ಆಸ್ಪತ್ರೆಯ ಸುವ್ಯವಸ್ಥೆಯನ್ನು ಕಾಪಾಡುವ ಮುಖ್ಯ ವೈದ್ಯ ಅಧಿಕಾರಿ ಬೇಕಾ ಬಿಟ್ಟಿಯಾಗಿ ಕಾರ್ಯ ನಿರ್ವಹಿಸಿದರೆ ಬಡ ರೋಗಿಗಳ ಗತಿ ಹೇಗೆ ಅಂತಾ ಚಿಕಿತ್ಸೆಗೆ ಬಂದ ಬಡ ರೋಗಿಗಳು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.ಆರೋಗ್ಯ ಇಲಾಖೆ ಅಧಿಕಾರಿಗಳು ಸಮಯ ಪ್ರಜ್ಞೆ ಇಲ್ಲದ ವೈದ್ಯರಿಗೆ ಕ್ರಮ ಜರುಗಿಸ ಬೇಕಾಗಿ ನಮ್ಮ ಸುದ್ದಿ ಮಾಧ್ಯಮ ಮೂಲಕ ಒತ್ತಾಯವಾಗಿದೆ.
ಬಾಕ್ಸ್ ಸುದ್ದಿ:-
ನನ್ನ ಮಗನಿಗೆ ಬಲಗೈ ಮುರಿದು ಹೋಗಿತ್ತು ಚೀಟಿ ಮಾಡಿ ಎಂದು ಹೇಳಿ ಹೋದ ಮುಖ್ಯ ವೈದ್ಯಾಧಿಕಾರಿಗಳು ಶಕೀಲಾ ಅಹ್ಮದ್ ನನ್ನ ಮಗ ನೋವಿನಿಂದ ಜೋರಾಗಿ ಅಳುತ್ತಿದ್ದರು ಯಾವ ಆಸ್ಪತ್ರೆಯ ಸಿಬ್ಬಂದಿಗಳು ತಿರುಗಿ ಸಹ ನೋಡಲಿಲ್ಲ ಇದಕ್ಕೆಲ್ಲಾ ಮುಖ್ಯ ವೈದ್ಯಾಧಿಕಾರಿಗಳೆ ಕಾರಣ.

ಸ್ಥಳೀಯ ನಿವಾಸಿ ಮುತ್ತಪ್ಪ ಜೋಗಣ್ಣವರ
ಬಾಕ್ಸ್ ಸುದ್ದಿ:-
ನಾವು 10 ಘಂಟೆಗೆ ಬಂದು ಇಲ್ಲಿ ಕಾಯುತ್ತಾ ಕುತಿದ್ದೇನೆ ಆದರೆ ವೈದ್ಯರು 1 ಗಂಟೆಗೆ ಬಂದರು ಹೀಗೆ ಪ್ರತಿ ದಿನ ತಮಗೆ ಬೇಕಾದಾಗ ಬರುತ್ತಾರೆ ಹೋಗುತ್ತಾರೆ ಇಲ್ಲಿ ದೊರ ದಿಂದ ಬಂದ ರೋಗಿಗಳು ದಿನ ಪೂರ್ತಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಸ್ಥಳೀಯ ನಿವಾಸಿ ಆಸೀಫ್.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ