ಒಳ ಮೀಸಲಾತಿ ಜಾರಿಗಾಗಿ ದೆಹಲಿಗೆ ಚಲೋ – “ಸಿದ್ದನಾಕ” ಭಾಸ್ಕರ್ ಪ್ರಸಾದ್ ಕರೆ.
ದಾವಣಗೆರೆ ಜು 06

ಮಾದಿಗ ಜನಾಂಗದ ಹೋರಾಟಗಾರರೇ ಸುಮಾರು 30 ವರ್ಷಗಳಿಂದ ಎಲ್ಲಾ ನಮ್ಮ ಹೋರಾಟಗಾರರು ಹಗಲು ಇರಳು ಹೊರಾಟ ಮಾಡಿದರೂ ಸರ್ಕಾರ ಮುಂದೂಡುತ್ತಾ ಬರುತ್ತಿದೆ. ಸ್ಥಳೀಯ ಬೇರೆ ಜನಾಂಗದ ಮಠಗಳಿಗೆ ನಮ್ಮ ಮಾದಿಗ ಜನಾಂಗ ಭೇಟಿ ಮಾಡಿ ಒಳ ಮಿಸಲಾತಿ ಜಾರಿಗಾಗಿ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ ನಮ್ಮ ನೋವನ್ನು ತಿಳಿಸಿದಾಗ ಅವರು ಸಹ ನಿಮಗೆ ಅನ್ಯಾಯವಾಗಿದೆ. ಒಳ ಮಿಸಲಾತಿ ಜಾರಿಗೆ ಬರಬೇಕು ಎಂದು ಬೆಂಬಲಿಸಿದ್ದಾರೆ. ತಾವು ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರಾರ್ಥನೆ ಮಾಡಿಕೊಳ್ಳಿ. ಪ್ರಮುಖ ಎಲ್ಲಾ ಮಠಗಳಲ್ಲಿ ಮನವಿ ಮಾಡಿ ಕೊಂಡಲ್ಲಿ ಮಠಗಳಿಂದ ಬೆಂಬಲ ಸಿಕ್ಕರೆ ತುರ್ತಾಗಿ ಒಳ ಮಿಸಲಾತಿ ಜಾರಿ ಯಾಗುತ್ತದೆ. ಇದು ಎಲ್ಲಾ ಜಿಲ್ಲೆಯ ಸವರ್ಣೆಯರು ಮತ್ತು ಹಿಂದುಳಿದ ಮಠಗಳಲ್ಲಿ ನಿಯೋಗ ಹೋಗಿ ಪ್ರಾರ್ಥಿಸಿರಿ ಚಳುವಳಿಗೆ ನೈತಿಕವಾಗಿ ಬೆಂಬಲ ಪಡೆದು ಒಳ ಮೀಸಲಾತಿಗಾಗಿ ದೆಹಲಿ ಚಲೋಗೆ ಮಾನಸಿಕವಾಗಿ “ಸಿದ್ದನಾಕ” ಭಾಸ್ಕರ್ ಪ್ರಸಾದ್ ಸೇನೆಗೆ ದಕ್ಷಿಣ ಭಾರತದ ಸ್ವಾಭಿಮಾನಿ ಸೇನಾನಿಗಳು ಸಾಗರದಂತೆ ಹರಿದು ಬರಲಿ ಜೈ ಮಾದಿಗ ಜೈ ಜೈ ಜೈ ಮಾದಿಗ, ಜೈ ಕೃಷ್ಣಪ್ಪ ಜೈ ಜೈ ಜೈ ಕೃಷ್ಣಪ್ಪ.
ವರದಿ:ಚಿದಾನಂದ ದಾವಣಗೆರೆ.