ಅಭಿವೃದ್ಧಿಗೆ ಒತ್ತು ಕೊಡಲು 5 ಕೋಟಿ ವೆಚ್ಚದಲ್ಲಿ ವಸತಿ ನಿಲಯದ ಗುದ್ದಲಿ ಪೂಜೆ ನೆರವೇರಿಸಿದ – ಶಾಸಕ ಡಾ, ಶ್ರೀನಿವಾಸ್. ಎನ್.ಟಿ
ಹುಲಿಕೆರೆ ಜು.07

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ಹುಲಿಕೆರೆ ರಸ್ತೆಯಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಹಿಂಭಾಗದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ 5 ಕೋಟಿ ರೂ ಅನುದಾನದಲ್ಲಿ ನಿಲಯದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್.ಎನ್.ಟಿ ಅವರು ಎಲ್ಲಾರ ನೇತೃತ್ವದಲ್ಲಿ ನೆರವೇರಿಸಿ ಮಾತನಾಡುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಸಹಳ್ಳಿ ಹೋಬಳಿಯ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ವೇಗಕ್ಕೆ ತಕ್ಕಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅಡಿಯಲ್ಲಿ ಈ ಭಾಗದ ಶಿಕ್ಷಣ, ಆರೋಗ್ಯ ಮತ್ತು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ತಿಳಿಸಿದರು. ಈ ಭಾಗದ ಹಳ್ಳಿಗಳಿಂದ ಬರುವ ಹೆಣ್ಣು ಮಕ್ಕಳಿಂದ ಕೂಡಿದ ವಸತಿ ನಿಲಯವು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದನ್ನು ಕಂಡು ಸರ್ಕಾರದ ಉನ್ನತ ಮಟ್ಟದಲ್ಲಿ ಅನುದಾನ ತಂದು ಇಲ್ಲಿನ ಶಿಕ್ಷಣಕ್ಕೆ ಒತ್ತು ಕೊಡಲು ಭೂಮಿ ಪೂಜೆ ನೆರವೇರಿಸಿದ್ದೇವೆ ಎಂದರು. ಇಲ್ಲಿನ ವಿದ್ಯಾರ್ಥಿಗಳು ಕೊಟ್ಟೂರಿನಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ ವಸತಿ ನಿಲಯ ನಿರ್ಮಾಣಕ್ಕಾಗಿ ಒತ್ತು ಕೊಡುವುದಾಗಿ ತಿಳಿಸಿದರು.

ಸಭೆ ಮುಗಿದ ಬಳಿಕವೂ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಬಗೆಹರಿಸಲು ಸೂಚಿಸಿದರು. ಶಾಲೆಯನ್ನು ಪರಿಶೀಲಿಸಿ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಒತ್ತು ಕೊಡುವುದಾಗಿ ತಿಳಿಸಿದರು. ಈ ವೇಳೆ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶಶಿಕಲಾ.ಜಿ ಬಿ.ಬಿ.ಸಿ.ಎಂ ತಾಲೂಕು ಅಧಿಕಾರಿ ಶ್ಯಾಮ್, ತಾಲೂಕು ಪಂಚಾಯಿತಿ ಇ.ಓ ನರಸಪ್ಪ, ಗ್ರಾ.ಪಂ ಅಧ್ಯಕ್ಷ ಕೆ.ಜಿ.ಸಿದ್ಧನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನಿಕಾಂತ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ ಕುಮಾರ ಗೌಡ್ರು, ಜಿ ಓಬಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಗದೀಶ ಬಿ.ಈ, ಗ್ರಾ. ಪಂ ಸದಸ್ಯರಾದ ನಾಗರಾಜ, ಪೋಟೋ ಸಿದ್ದಲಿಂಗಪ್ಪ, ಬೋರಣ್ಣ, ಹೊನ್ನೂರಪ್ಪ,ಬಿ ಜಗದೀಶ, ಜುಟ್ಟು ಲಿಂಗನಹಟ್ಟಿ ಬೊಮ್ಮಣ್ಣ ಹಾಗೂ ಹೊಸಹಳ್ಳಿ ಪಿಎಸ್ಐ ಸಿದ್ರಾಮ ಬಿದರಾಣಿ, ಪಿಡಿಒ ವಿನಯ್ ಕುಮಾರ್, ಹುಲಿಕೆರೆ ವೆಂಕಟೇಶ್, ಡಾ.ಟಿ. ಓಂಕಾರಪ್ಪ ಹುಲಿಕೆರೆ, ಬೋಸೆ ಮಲ್ಲಯ್ಯ ಹೂಡೇಂ, ಬಗ್ಲರ್ ಪಾಪಣ್ಣ, ಗಫರ್ ಸಾಬ್, ಇಮಡಾಪುರ ವೀರೇಶ್ವರಯ್ಯ, ಹಿರೇ ಕುಂಬಳಗುಂಟೆ ಮನೋಜ್ ಕುಮಾರ್, ಖಲಂದರ್, ಹರೀಶ್ ಸಕಲಾಪುರದ ಹಟ್ಟಿ, ಡಿಎಸ್.ಎಸ್ ತಾಲೂಕ್ ಅಧ್ಯಕ್ಷ ಗಂಗಾಧರ, ನಿವೃತ್ತಿ ಕೆಇಬಿ ಮಾರಪ್ಪ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಹೇಶ, ವಸತಿ ನಿಲಯ ಪಾಲಕರಾದ ಸಹನಾ, ಸುಮಾ, ಪ್ರಕಾಶ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ